ಬೆಂಗಳೂರು: ಕತ್ತಲೆಯನ್ನು ಹೋಗಲಾಡಿಸಿ ಮನೆ ಹಾಗೂ ಮನದ ಕತ್ತಲೆಯನ್ನು ನಿವಾರಿಸಿ ಬೆಳಕನ್ನು ಉಂಟು ಮಾಡುವ ಹಬ್ಬವೇ ದೀಪಾವಳಿ. ಈ ದೀಪಾವಳಿಗೆ ಜನಸಾಮ್ಯಾನರಿಗೆ ಶಾಕ್ ನೀಡಿದೆ. ಹೌದು ಎಲ್‌ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯಾಗಿದೆ. 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ಇದೀಗ 62 ರೂಪಾಯಿ ಏರಿಕೆ ಮಾಡಲಾಗಿದೆ. ಇದರಿಂದ ವಾಣಿಜ್ಯ ಉದ್ದೇಶಕ್ಕೆ ಬಳಸುವ ಸಿಲಿಂಡರ್ ಬೆಲೆ ದುಬಾರಿಯಾಗಿದೆ. ಶೀಘ್ರದಲ್ಲೇ ಹೊಟೆಲ್ ತಿನಿಸು ಸೇರಿದಂತೆ ಹಲವು ವಸ್ತುಗಳ ಬೆಲೆ ಏರಿಕೆಯಾಗಿದೆ.14 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬೆಲೆ ಏರಿಕೆ ಮಾಡಿಲ್ಲ.
ಬೆಲೆ ಏರಿಕೆ ಬಳಿಕ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ 1802 ರೂಪಾಯಿಗೆ ಏರಿಕೆಯಾಗಿದೆ. ಸೆಪ್ಟೆಂಬರ್, ಅಕ್ಟೋಬರ್ ಇದೀಗ ನವೆಂಬರ್ ಸತತ ಮೂರು ತಿಂಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆಯಾಗಿದೆ. ಅಕ್ಟೋಬರ್ ತಿಂಗಳಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 48 ರೂಪಾಯಿ ಏರಿಕೆಯಾಗಿತ್ತು. ಇನ್ನು ಸೆಪ್ಟೆಂಬರ್ ತಿಂಗಳಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 39 ರೂಪಾಯಿ ಏರಿಕೆ ಮಾಡಲಾಗಿತ್ತು.
ಕೊಂಚ ಸಮಾಧಾನದ ವಿಷಯ ಎಂದರೆ ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಹೀಗಾಗಿ ಈ ಬಾರಿಯ ದೀಪಾವಳಿಯನ್ನು ನೆಮ್ಮದಿಯಿಂದ ಆಚರಿಸುವಂತಾಗಿದೆ. ಆದರೆ ಹೊಟೆಲ್ ತಿಂಡಿ ಸೇರಿದಂತೆ ವಾಣಿಜ್ಯ ಸಿಲಿಂಡರ್ ಬಳಕೆ ಮಾಡುವ ಸಂಸ್ಥೆಗಳಲ್ಲಿನ ಉತ್ಪನ್ನಗಳ ಬೆಲೆ ಶೀಘ್ರದಲ್ಲೇ ಏರಿಕೆಯಾಗಲಿದೆ.
19 ಕೆಜಿ ಎಲ್‌ಪಿಜಿ ಸಿಲಿಂಡರ್ ಪರಿಷ್ಕೃತ ಬೆಲೆ
ಬೆಂಗಳೂರು: 1880 ರೂಪಾಯಿ
ದೆಹಲಿ: 1802 ರೂಪಾಯಿ
ಮುಂಬೈ: 1754.50 ರೂಪಾಯ
ಕೋಲ್ಕತಾ:1911.50 ರೂಪಾಯಿ
ಚೆನ್ನೈ: 1,964 .50 ರೂಪಾಯಿ



