ಗದಗ ನಗರ ಠಾಣೆ ಪೊಲೀಸರ ಬಲೆಗೆ ಬಿದ್ದ ಮನೆಗಳ್ಳರು

Vijayasakshi (Gadag News) :

ವಿಜಯಸಾಕ್ಷಿ ಸುದ್ದಿ, ಗದಗ: ನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಅಂತರ ಜಿಲ್ಲಾ ಮನೆಗಳ್ಳರ ಹಾಗೂ ಸರಗಳ್ಳರನ್ನು ಬಂಧಿಸಿದ್ದಾರೆ. ಬಂಧಿತರನ್ನು ಹುಬ್ಬಳ್ಳಿಯ ತಾರಿಹಾಳದ ರಾಮನಗರ ನಿವಾಸಿ ಕಾಸೀಂ ಗಾಳೆಪ್ಪ ಹುಬ್ಬಳ್ಳಿ ಹಾಗೂ ಗದಗ ನಗರದ ಸುನೀಲ್ ಸಂಜೀವಪ್ಪ ಮುಳಗುಂದ ಎಂದು ಗುರುತಿಸಲಾಗಿದೆ.

ಕಳೆದ ವರ್ಷ ನವಂಬರ್ ತಿಂಗಳ 25 ರಂದು ನಗರದ ಗಣೇಶ್ ಕಾಲೋನಿಯ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಅವರ ಮನೆಯ ಬೀಗ ಮುರಿದು 2,37,000 ಮೌಲ್ಯದ ಬಂಗಾರ ಮತ್ತು ಬೆಳ್ಳಿ ಆಭರಣಗಳನ್ನು ಕದ್ದೊಯ್ದಿದ್ದರು.

ಡಿಸೆಂಬರ್ 17 ರಂದು ಶಿವಾನಂದ ನಗರದಲ್ಲಿ ಮಹಿಳೆಯ ಕೊರಳಲ್ಲಿದ್ದ 1,35,000 ಮೌಲ್ಯದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿದ್ದರು. ಇನ್ನು ಬೆಳಗಾವಿ ಜಿಲ್ಲೆ ಬೈಲಹೊಂಗಲ ಪಟ್ಟಣದ ದೇವಸ್ಥಾನವೊಂದರ ಹುಂಡಿ ಮತ್ತು ರಾಮದುರ್ಗದಲ್ಲಿ ಮನೆ ಕಳ್ಳತನವನ್ನೂ ಮಾಡಿದ್ದರು.

ಬಂಧಿತ ಆರೋಪಿತರಿಂದ ಒಟ್ಟು 5,00,000 ಮೌಲ್ಯದ ಬಂಗಾರ ಮತ್ತು ಬೆಳ್ಳಿ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಗರದ ಕಳಸಾಪುರ ರಸ್ತೆಯ ಬಾಪೂಜಿ ನಗರದ ಸಮೀಪ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಇವರನ್ನು ಬಂಧಿಸಲಾಗಿದೆ.

ಗದಗ ಎಸ್ಪಿ ಯತೀಶ್ ಎನ್ ಹಾಗೂ ಡಿವೈಎಸ್ಪಿ ಕೆ ಪ್ರಹ್ಲಾದ್ ಅವರ ಮಾರ್ಗದರ್ಶನದಲ್ಲಿ ನಗರ ಠಾಣೆ ಸಿಪಿಐ ಪಿ ವಿ ಸಾಲಿಮಠ, ಪಿಎಸ್ಐ ಶ್ರೀಮತಿ ಜಿ ಟಿ ಜಕ್ಕಲಿ, ಎಆರ್ ಎಸ್ಐ ಜಿ ಎಂ ಬೂದಿಹಾಳ, ಸಿಬ್ಬಂದಿಗಳಾದ ಬಿ ಜಿ ಹೊರಕೇರಿ, ವಿ ಎಸ್ ಶೆಟ್ಟಣ್ಣವರ್, ಎಸ್ ಎ ಗುಡ್ಡಿಮಠ, ಎಂ ಎ ಸದರನ್ನವರ್, ಪಿ ಆರ್ ಕುಲಕರ್ಣಿ, ಹನುಮಂತ ಯಡಿಯಾಪುರ್, ಪ್ರವೀಣ್ ಕಲ್ಲೂರ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTube ಅನುಸರಿಸಿ.

Leave A Reply

Your email address will not be published.