ರೈತರಿಗೆ ವಕ್ಫ್ ನೋಟಿಸ್: ಇದು ಅಧಿಕಾರಿಗಳ ಎಡವಟ್ಟು ಎಂದ ಸಚಿವ ಬೋಸರಾಜು!

0
Spread the love

ಮಡಿಕೇರಿ:- ರೈತರ ಜಮೀನುಗಳಿಗೆ ವಕ್ಫ್ ನಿಂದ ನೋಟಿಸ್ ಜಾರಿ ಆಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಬೋಸರಾಜು ಪ್ರತಿಕ್ರಿಯೆ ಕೊಟ್ಟಿದ್ದಾರೆ.

Advertisement

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಹಿಂದಿನ ಅಧಿಕಾರಗಳ ಯಡವಟ್ಟಿನಿಂದ ಕೆಲವೆಡೆ ದಾಖಲಾತಿಗಳಲ್ಲಿ ವಕ್ಫ್‌ ಆಸ್ತಿ ಎಂದು ನಮೂದಾಗಿದೆ. ಅದೆಲ್ಲವನ್ನು ಸರಿಪಡಿಸಲು ಈಗಾಗಲೇ ಸಿಎಂ ಆದೇಶ ನೀಡಿದ್ದಾರೆ. ಆದ್ರೆ ಬಿಜೆಪಿಯವರು ಈ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದರು.

ವಿವಿಧ ಜಿಲ್ಲೆಯ ಹಲವು ರೈತರಿಗೆ ಸಂಬಂಧಿಸಿದ ಜಮೀನಿನ ಪಹಣಿ ಪತ್ರದಲ್ಲಿ ವಕ್ಫ್‌ ಆಸ್ತಿ ಎಂದು ನಮೂದಾಗಿದೆ. ಇದು ಹಿಂದಿನ ಅಧಿಕಾರಿಗಳಿಂದ ಆಗಿರುವ ಯಡವಟ್ಟು. ಅದಕ್ಕೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಕ್ಯಾಬಿನೆಟ್‌ನಲ್ಲಿಯೂ ಈ ವಿಚಾರ ಪ್ರಸ್ತಾಪ ಮಾಡಿ ತಕ್ಷಣವೇ ಸರಿಪಡಿಸುವಂತೆ ಆದೇಶ ನೀಡಿದ್ದಾರೆ. ಆದ್ರೆ ರಾಜ್ಯದಲ್ಲಿ ಉಪಚುನಾವಣೆ ಇರುವುದರಿಂದ ಬಿಜೆಪಿ ಇದನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ ಎಂದು ಅವರು ಕಿಡಿ ಕಾರಿದ್ದಾರೆ.


Spread the love

LEAVE A REPLY

Please enter your comment!
Please enter your name here