HomeGadag Newsಹೋರಾಟದಿಂದ ಸಮಸ್ಯೆ ಪರಿಹಾರವಾಗದು : ಚನ್ನಪ್ಪ ಜಗಲಿ

ಹೋರಾಟದಿಂದ ಸಮಸ್ಯೆ ಪರಿಹಾರವಾಗದು : ಚನ್ನಪ್ಪ ಜಗಲಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದಲ್ಲಿ ಕಳೆದ ತಿಂಗಳ 12ರಂದು ನಡೆದ ಸಣ್ಣ ಘಟನೆಯನ್ನೇ ಕಾರಣವಾಗಿಟ್ಟುಕೊಂಡು ಪಟ್ಟಣದಲ್ಲಿ ಬಂದ್, ಧರಣಿ ಸತ್ಯಾಗ್ರಹಗಳು ನಡೆಯುತ್ತಿದ್ದು, ಇವುಗಳನ್ನು ಆದಷ್ಟು ಬೆಳವಣಿಗೆಯಾಗದಂತೆ ಎಲ್ಲರೂ ಕುಳಿತು ಚರ್ಚಿಸಿ ತಿಳಿಗೊಳಿಸುವ ಕಾರ್ಯ ಮಾಡಬೇಕು ಎಂದು ತಾ.ಪಂ ಮಾಜಿ ಸದಸ್ಯ ಚನ್ನಪ್ಪ ಜಗಲಿ ಹೇಳಿದರು.

ಅವರು ಪಟ್ಟಣದ ಪತ್ರಿಕಾ ಕಾರ್ಯಾಲಯದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ತಿಂಗಳ 12ರಂದು ಗೋಸಾವಿ ಸಮಾಜದವರು ಹಾಗೂ ಕೆಲವು ಕಿಡಿಗೇಡಿಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆಯ ಕಾರಣಕ್ಕಾಗಿ ಲಕ್ಷ್ಮೇಶ್ವರ ಬಂದ್ ಮಾಡುವುದು, ರಸ್ತೆ ಬಂದ್, ಪ್ರತಿಭಟನೆ ಇತ್ಯಾದಿಗಳು 20 ದಿನಗಳಿಂದ ನಡೆಯುತ್ತಿದ್ದರೂ ಉದ್ದೇಶ ಜನರಿಗೆ ಅರ್ಥವಾಗುತ್ತಿಲ್ಲ. ಪಿಎಸ್‌ಐ ಅವರು ತಪ್ಪು ಮಾಡಿದ್ದರೆ ಅದನ್ನು ಹಿರಿಯರಿಗೆ ಮತ್ತು ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿ ಘಟನೆಯನ್ನು ತಿಳಿಗೊಳಿಸಬಹುದಾಗಿತ್ತು. ಅಮಾಯಕರ ಮೇಲೆ ಹಲ್ಲೆ ನಡೆದಿದ್ದರೆ ನಾವು ಸಹ ಅದನ್ನು ಖಂಡಿಸುತ್ತೇವೆ. ಆದರೆ ಇದನ್ನೇ ಆಧಾರವಾಗಿಟ್ಟುಕೊಂಡು ಹೋರಾಟ ಮಾಡುತ್ತಿರುವದರಿಂದ ಸಮಸ್ಯೆಗಳು ಪರಿಹಾರವಾಗುವದಿಲ್ಲ ಎಂದರು.

ಇಂತಹ ಘಟನೆಯಿಂದ ಭಯದ ವಾತಾವರಣ ನಿರ್ಮಾಣವಾಗಿದೆ. ಇದರಿಂದ ವ್ಯಾಪಾರಸ್ಥರಿಗೆ, ಪಟ್ಟಣಕ್ಕೆ ಬರುವ ಜನರಿಗೆ ತೊಂದರೆ ಆಗುತ್ತಿದೆ. ಗೋಸಾವಿ ಸಮಾಜದವರು ಬಡವರಾಗಿದ್ದು, ಇತರೆ ಸಮಾಜದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅಧಿಕಾರ ಮತ್ತು ಅಧಿಕಾರಿಗಳು ಇಂದು ಬಂದು ನಾಳೆ ಹೋಗಬಹುದು.

ಆದರೆ ಗೋಸಾವಿ ಸಮಾಜದವರನ್ನು ಬಾವಿಗೆ ಇಳಿಸುವ ಕೆಲಸ ಆಗುತ್ತಿದೆ. ಸಮಸ್ಯೆಯನ್ನು ಹಿರಿಯರ ಮಧ್ಯೆ ಕುಳಿತು ಬಗೆಹರಿಸಿಕೊಳ್ಳುವ ಕಾರ್ಯ ಮಾಡಿ ಎಂದು ಗೋಸಾವಿ ಸಮಾಜದವರಿಗೆ ಈ ಮೂಲಕ ಮನವಿ ಮಾಡುತ್ತೇವೆ ಎಂದರು.

ಇಂತಹ ಘಟನೆಯನ್ನು ತಿಳಿಗೊಳಿಸುವದಕ್ಕೆ ಶಾಸಕರು ಆದ್ಯತೆ ನೀಡಲಿ. ಗೋಸಾವಿ ಸಮಾಜದವರು ಪ್ರತಿಭಟನೆಯನ್ನು ಕೈಬಿಟ್ಟು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ಸಾರ್ವಜನಿಕರ ಪರವಾಗಿ ಮನವಿ ಮಾಡುವದಾಗಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸುರೇಶ ನಂದೆಣ್ಣವರ, ಸೋಮಣ್ಣ ಬೆಟಗೇರಿ, ಪದ್ಮರಾಜ ಪಾಟೀಲ, ಶರಣು ಗೋಡಿ, ಮುದಕಣ್ಣ ಗದ್ದಿ ಮುಂತಾದವರು ಹಾಜರಿದ್ದರು.

ಈ ಘಟನೆಯನ್ನು ತಿಳಿಗೊಳಿಸುವ ಕಾರ್ಯ ಮಾಡಬೇಕಾಗಿದ್ದ ಶಾಸಕರು ಇಂತಹ ಸಣ್ಣ ಘಟನೆಯನ್ನು ಬೆಂಬಲಿಸುವ ಮೂಲಕ ಜನರಿಗೆ ತಪ್ಪು ಸಂದೇಶ ನೀಡಿದಂತಾಗಿದೆ. ಹೋರಾಟಕ್ಕೆ ಬೆಂಬಲ ನೀಡುವದು ತಪ್ಪು ಎನ್ನುವದಿಲ್ಲ, ಆದರೆ ಇಂತಹ ಘಟನೆ ಆದ ಸಂದರ್ಭದಲ್ಲಿ ಗಲಾಟೆ ಮಾಡಿದ ಎರಡೂ ಸಮಾಜದವರನ್ನು, ಅಧಿಕಾರಿಗಳನ್ನು ಕರೆಸಿ ರಾಜಿ ಮಾಡಿ ಕಳಿಸಬೇಕಿತ್ತು. ಅದನ್ನು ಬಿಟ್ಟು ಬೆಂಬಲ ಕೊಡಲು ಮುಂದಾಗಿರುವದು ದುರದೃಷ್ಟಕರ. ಶಾಸಕರಿಗೆ ಕ್ಷೇತ್ರದಲ್ಲಿ ಮಾಡಲು ಸಾಕಷ್ಟು ಕಾರ್ಯಗಳಿವೆ, ಅಭಿವೃದ್ಧಿ ಕಾರ್ಯಗಳತ್ತ ಅವರು ಗಮನ ಹರಿಸುವದು ಸೂಕ್ತ ಎಂದು ಚನ್ನಪ್ಪ ಜಗಲಿ ಹೇಳಿದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!