ಬೆಂಗಳೂರು: ಮುಡಾ ಪ್ರಕರಣದಲ್ಲಿ ಸಿಎಂ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತವಾದ ಷಡ್ಯಂತ್ರ ಎಂದು ಸಚಿವ ಮಹದೇವಪ್ಪ ಹೇಳಿದ್ದಾರೆ. ನಗರಲದಲಿ ಮಾತನಾಡಿದ ಅವರು, ಸಿಎಂ ಮೇಲೆ ಲೋಕಾಯುಕ್ತದಿಂದ ತನಿಖೆ ಸರಿಯಾಗಿ ಆಗುತ್ತಾ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ತನಿಖೆಗೂ ಅವರ ಸ್ಥಾನಕ್ಕೂ ಸಂಬಂಧವಿಲ್ಲ. ಕಾನೂನು ಎಲ್ಲರಿಗೂ ಒಂದೇ. ಕಾನೂನು ಯಾವತ್ತು ಬದಲಾವಣೆ ಆಗುವುದಿಲ್ಲ.
Advertisement
ಸೆಕ್ಷನ್ ಬದಲಾವಣೆ ಆಗುವುದಿಲ್ಲ. ಸರ್ಕಾರದ ಅಧೀನ ಸಂಸ್ಥೆಗಳು ಸಿಎಂರನ್ನು ಸರಿಯಾಗಿ ತನಿಖೆ ಮಾಡುವುದಿಲ್ಲ ಅನ್ನುವುದು ಕೆಲವರ ಭಾವನೆ. ಅವೆಲ್ಲ ಅಂತೆ-ಕಂತೆಗಳು. ಕಾನೂನಿನ ಮುಂದೆ ಎಲ್ಲರೂ ಒಂದೇ. ಮುಡಾ ಕೇಸ್ ಸಿಎಂ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತವಾದ ಷಡ್ಯಂತ್ರ. 40 ವರ್ಷಗಳಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲದೆ ಸಿದ್ದರಾಮಯ್ಯ ಆಡಳಿತ ಮಾಡಿಕೊಂಡು ಬಂದಿದ್ದರು. ಸಿದ್ದರಾಮಯ್ಯ ಶುದ್ಧ ಹಸ್ತರಾಗಿ ಇದ್ದಾರೆ. ಮುಂದೆಯೂ ಇರುತ್ತಾರೆ ಎಂದರು.