ರಾಮನಗರ: ಶರೀರದಲ್ಲಿ ಕೊನೆ ಉಸಿರಿರುವವರೆಗೆ ನನ್ನ ಜನಕ್ಕೋಸ್ಕರ ಹೋರಾಡುತ್ತೇನೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಹೇಳಿದ್ದಾರೆ. ಚನ್ನಪಟ್ಟಣ ವಿಧಾನಸಭಾ ವ್ಯಾಪ್ತಿಯ ಕೋಡಂಬಳ್ಳಿಯಲ್ಲಿ ದೇವೇಗೌಡ್ರು ಇಂದು ಭರ್ಜರಿ ಮತಯಾಚನೆ ಮಾಡಿದ್ರು. ಈ ವೇಳೆ ಮಾತನಾಡಿದ ಅವರು, ಜನತೆಯ ಆಶೀರ್ವಾದವಿದ್ದರೆ ಇನ್ನೂ ನಾಲ್ಕಾರು ವರ್ಷ ಜನರ ಸೇವೆ ಮಾಡುತ್ತೇನೆ, ಶರೀರದಲ್ಲಿ ಕೊನೆ ಉಸಿರಿರುವವರೆಗೆ ನನ್ನ ಜನಕ್ಕೋಸ್ಕರ ಹೋರಾಡುತ್ತೇನೆ ಎಂದು ದೇವೇಗೌಡ ಹೇಳಿದರು.
ಇನ್ನೂ ಎತ್ತಿನಹೊಳೆ ನೀರು ಕೋಲಾರಕ್ಕೆ ಬಂದರೆ ನಾನು ದೀರ್ಘದಂಡವಾಗಿ ನಮಸ್ಕಾರ ಮಾಡ್ತೀನಿ ಅಂತ ದೇವೇಗೌಡರು ಸವಾಲು ಹಾಕಿದ್ರು. ಮಹಾನುಭಾವರು, ಕೋಲಾರ, ಚಿಕ್ಕಬಳ್ಳಾಪುರಕ್ಕೆ ಎತ್ತಿನಹೊಳೆ ನೀರು ತರುತ್ತಾರಂತೆ? ತುಂಬಾ ವಿಷಯ ಇದೆ ಮಾತಾಡಿದ್ರೆ ಅಂತ ಆಕ್ರೋಶ ವ್ಯಕ್ತಪಡಿಸಿದ್ರು.



