ವಿಜಯಸಾಕ್ಷಿ ಸುದ್ದಿ, ಗದಗ : ನಗರದ ತೋಂಟದಾರ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿದ ಪ್ರಾಂಶುಪಾಲ ಡಾ. ಎಮ್.ಎಮ್. ಅವಟಿ ಮಾತನಾಡಿ, ಕನ್ನಡ ಭಾಷೆ ನಮ್ಮ ಹೆಮ್ಮೆ ಮತ್ತು ನಮ್ಮ ಪರಂಪರೆ. ನಾಡು, ನುಡಿ ಮತ್ತು ನಾಡಿನ ಸಾಂಸ್ಕೃತಿಕ ವೈವಿಧ್ಯತೆಯ ಪರಿಮಳವನ್ನು ಉಳಿಸಲು ಪ್ರತಿಯೊಬ್ಬ ಕನ್ನಡಿಗನೂ ಮುಂದಾಗಬೇಕು ಎಂದರು.
ಇಲೆಕ್ಟಿçಕಲ್ ವಿಭಾಗದ ಮುಖ್ಯಸ್ಥರಾದ ಡಾ. ಈರಣ್ಣ ಕೋರಚಗಾಂವ ಮಾತನಾಡಿ, ಭಿನ್ನ ಭಾಷೆ, ಸಂಸ್ಕೃತಿ ಮತ್ತು ವೈವಿಧ್ಯತೆಯ ನಡುವೆಯೂ ಕನ್ನಡ ನಮ್ಮ ಒಗ್ಗಟ್ಟಿಗೆ ಆಧಾರವಾಗಿದ್ದು, ಇದು ನಮ್ಮ ನಾಡಿನ ಸೌಂದರ್ಯವಾಗಿದೆ ಎಂದರು.
ಪ್ರೊ. ಮಲ್ಲಿಕಾರ್ಜುನ ಜಿ.ಡಿ. ಮತ್ತು ಪ್ರೊ. ತೆಹಸಿನ್ ಶಿಗ್ಲಿ ಅವರು ಕನ್ನಡದ ನಾಡಪ್ರಭುಗಳ ಮತ್ತು ಹೋರಾಟಗಾರರ ಜೀವನದ ಕುರಿತು ವಿಚಾರ ಹಂಚಿಕೊಂಡರು. ಪ್ರೊ. ಜಗದೀಶ ಶಿವನಗುತ್ತಿ ಮತ್ತು ಪ್ರೊ. ಸಂತೋಷಕುಮಾರ್ ಜಿ.ಎಂ. ಅವರ ಮಾರ್ಗದರ್ಶನದಲ್ಲಿ `ಕನ್ನಡದ ಹೆಜ್ಜೆ’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕನ್ನಡದ ಗೀತೆಗಳನ್ನು ಹಾಡಿದರು.
ಕಾರ್ಯಕ್ರಮದಲ್ಲಿ ಪ್ರೊ. ಗೌತಮ ರೇವಣಕರ, ಪ್ರೊ. ದಯಾನಂದ ಗೌಡರ, ಪ್ರೊ. ಲೋಕೇಶ, ಪ್ರೊ. ರಮೇಶ ಬಡಿಗೇರ, ಪ್ರೊ. ಆರ್.ವಿ. ಕಡಿ, ಪ್ರೊ. ಐ.ಎಸ್. ಪಾಟೀಲ, ಪ್ರೊ. ಅಶ್ವಿನಿ ಅರಳಿ, ಪ್ರೊ. ಮಧುಸೂಧನ ಕುಲಕರ್ಣಿ, ಪ್ರೊ. ಶೈಲಜಾ ಮುದೇನಗುಡಿ, ಪ್ರೊ. ಲೋಹಿತ್, ಪ್ರೊ. ಪ್ರಸನ್ನ ನಾಡಗೌಡ, ಪ್ರೊ. ಸುನಿಲ ಪಾಟೀಲ, ಪ್ರೊ. ವೀರೇಶ ಮಾಗಳದ, ಪ್ರೊ. ವಿಜಯಕುಮಾರ ಮಾಲಗಿತ್ತಿ, ಪ್ರೊ. ಮಹಾಂತ ಕಟ್ಟಿಮನಿ, ಪ್ರೊ. ಬಸವರಾಜ ಪಾಟೀಲ ಸೇರಿದಂತೆ ಶಿಕ್ಷಕರು ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.