ಗದುಗಿನಲ್ಲಿ ಹುಟ್ಟಿದ ನಾವೆಲ್ಲರೂ ಪುಣ್ಯವಂತರು : ಶ್ರೀ ವಿರೇಶ್ವರಗುರುಜಿ

0
Flag hoisting program of 69th Kannada Rajyotsava
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಕರ್ನಾಟಕ ರಕ್ಷಣಾ ವೇದಿಕೆ (ಹೆಚ್.ಶಿವರಾಮೇಗೌಡ್ರ ಬಣ) ಗದಗ ಘಟಕದಿಂದ 69ನೇ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮವನ್ನು ಗದಗ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಏರ್ಪಡಿಸಲಾಗಿತ್ತು.

Advertisement

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಶ್ರೀ ಅನ್ನದಾನೀಶ್ವ ಶಾಖಾಮಠ ನರಸಾಪುರದ ಶ್ರೀ ವಿರೇಶ್ವರಗುರುಜಿ ಹಿರೇಮಠ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಏಕೀಕರಣದ ರೂವಾರಿ ದಿ. ಅಂದಾನಪ್ಪ ದೊಡ್ಡಮೇಟಿ ಅವರು ತಮ್ಮದೇ ಆದ ಕಲ್ಪನೆಯ ಕನ್ನಡಮ್ಮನ ಭಾವಚಿತ್ರವನ್ನು ಕೊಡುಗೆ ನೀಡಿದರೆ, ಹುಯಿಲಗೊಳ ನಾರಾಯಣರಾಯರು ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಎನ್ನುವ ಹಾಡಿನ ಮೂಲಕ ಕನ್ನಡ ಕ್ರಾಂತಿಯನ್ನೇ ಹೊತ್ತಿಸಿದರು. ಗದುಗಿನ ಭಾರತ ಬರೆದ ಕುಮಾರವ್ಯಾಸರು, ಹಿಂದೂಸ್ತಾನಿ ಸಂಗೀತದ ಮಾಂತ್ರಿಕ ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಭೀಮಸೇನ ಜೋಶಿ, ಅಂಧ-ಅನಾಥರ ಬದುಕಿಗೆ ಸಂಗೀತ ಬೆಳಕು ನೀಡಿದ ಶ್ರೀ ಗುರುಪುಟ್ಟರಾಜ ಗವಾಯಿಗಳು, ತ್ರಿವಿಧ ದಾಸೋಹಿ ಮೃಡಗಿರಿ ಶ್ರೀ ಅನ್ನದಾನೀಶ್ವರರು, ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು ಹೀಗೆ ಹತ್ತು ಹಲವಾರು ಮುಂದಾಳುಗಳನ್ನು ಹೊಂದಿದ ನಮ್ಮ ಹೆಮ್ಮೆಯ ಗದಗ ಜಿಲ್ಲೆಯಲ್ಲಿ ಹುಟ್ಟಿದ ನಾವೆಲ್ಲರೂ ಪುಣ್ಯವಂತರು ಎಂದರು.

ಮುಖ್ಯ ಅತಿಥಿಗಳಾಗಿ ಕಿತ್ತೂರು ಚೆನ್ನಮ್ಮ ಗದಗ ಬ್ರಾಂಚ್ ಮ್ಯಾನೇಜರ್ ಮಲ್ಲಿಕಾರ್ಜುನ ಕಿರೇಸೂರ, ಜನಪದ ಕಲಾವಿದ ಗವಿಸಿದ್ದಯ್ಯ ಹಳ್ಳಿಕೇರಿಮಠ, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ಬಸಲಿಂಗಪ್ಪ ಮುಂಡರಗಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಕರವೇ ಗದಗ ಜಿಲ್ಲಾ ಗೌರವಾಧ್ಯಕ್ಷ ಗುರುರಾಜ ಕಲಕೇರಿ, ಹಿರಿಯರಾದ ಧಾವಲ್ ಮುಳಗುಂದ, ಜಿಲ್ಲಾ ಪ್ರ.ಕಾರ್ಯದರ್ಶಿ ಬಸವರಾಜ ಮುಳ್ಳಾಳ, ಗದಗ-ಬೆಟಗೇರಿ ನಗರಾಧ್ಯಕ್ಷ ಮುತ್ತಣ್ಣಾ ಬಜಂತ್ರಿ, ಜಿಲ್ಲಾ ಸಂಚಾಲಕ ಪರಶುರಾಮ ಬನ್ನೂರ, ಚಂದ್ರಣ್ಣಾ ಬಿಂಗಿ, ರಮೇಶ ಅಬ್ಬಿಗೇರಿ, ಸುರೇಶ ಮುಳಗುಂದ, ವಿದ್ಯಾರ್ಥಿ ಘಟಕದ ಉದಯ ಧಳವಾಯಿ, ಯುವ ಘಟಕದ ಸಂಜಿವಗೌಡ ಬೆನಹಾಳ, ಅಪ್ಪನ್ನಾ ಕಾಳೆ, ಮಹಿಳಾ ಘಟಕದ ಈರಮ್ಮ ಕೆಂಚಿ, ಹರ್ಷಾ ಗದಗಿನ, ಮಂಜುನಾಥ ಕಿರೇಸೂರ, ಮಾರುತಿ ಬೋರೊಜಿ, ಸಿಕಂದರ್ ಅಣ್ಣಿಗೇರಿ, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರವೇ ಗದಗ ಜಿಲ್ಲಾಧ್ಯಕ್ಷ ಮಂಜುನಾಥ ಪಿ.ಪರ್ವತಗೌಡ್ರ ಮಾತನಾಡಿ, ಈ ನಾಡಿನ ನೆಲ, ಜಲ, ಭಾಷೆಯ ರಕ್ಷಣೆಗೆ ನಾವೆಲ್ಲರೂ ಸದಾ ಕಟಿಬದ್ಧರಾಗಿರಬೇಕು. ಜೊತೆಗೆ ಕಪ್ಪತಗುಡ್ಡ ಹಲಾವಾರು ಔಷಧಿಯ ಗಿಡಮೂಲಿಕೆ ಗಿಡ ಮರಗಳನ್ನ ಹೊಂದಿದ್ದು, ರಾಮಾಯಣ ಕಾಲದಲ್ಲಿ ಲಕ್ಷö್ಮಣನಿಗೆ ಮರುಜನ್ಮ ನೀಡಿದ ಸಂಜೀವಿನಿ ಕಡ್ಡಿಯು ಕಪ್ಪತಗುಡ್ಡದಲ್ಲಿ ದೊರಕಿದೆ. ಹೀಗೆ ಹತ್ತು ಹಲವಾರು ಇತಿಹಾಸ ಹೊಂದಿರುವ ಕಪ್ಪತ್ತಗುಡ್ಡದಲ್ಲಿ ಯಾವುದೇ ಗಣಿಗಾರಿಕೆ ನಡೆಸಲು ಸರಕಾರ ಮುಂದಾಗಬಾರದು ಎಂದರು.


Spread the love

LEAVE A REPLY

Please enter your comment!
Please enter your name here