ವಿಜಯಪುರ: ಮುಡಾ ಹಗರಣ ಬೆಳಕಿಗೆ ಬಂದ ಮೇಲೆ ಸಿಎಂಗೆ ತಾಯಿ ಚಾಮುಂಡಿಯ ನೆನಪಾಗಿದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ವಕ್ಫ್ ಬೋರ್ಡ್ ವಿರುದ್ಧ ಸಮರ ಸಾರಿ ವಿಜಯಪುರದಲ್ಲಿ ರೈತರ ಪರವಾಗಿ ಸತ್ಯಾಗ್ತಹ ನಡೆಸುತ್ತಿರುವ ಯತ್ನಾಳ್ ಭಾಷಣದಲ್ಲಿ ಸಿಎಂ ಸಿದ್ದರಾಮಯ್ಯರನ್ನು ಲೇವಡಿ ಮಾಡುತ್ತ ತರಾಟೆಗೆ ತೆಗೆದುಕೊಂಡರು.
ಅಂದು ಕುಂಕುಮ ಹಚ್ಚದ ಸಿಎಂ ಈಗ ಕುಂಕುಮ ಹಚ್ಚಿಕೊಳ್ಳುತ್ತಿದ್ದಾನೆ. ಚಾಮುಂಡೇಶ್ವರಿ ಬಳಿ ಹೋಗಿ ಈಗ ಕುಂಕುಮ ಹಚ್ಚಿ ಎನ್ನುತ್ತಿದ್ದಾನೆ. ವಿಜಯಪುರದ ವಾಗ್ದೇವಿ ದೇಗುಲದ ಒಳಗೆ ಸಿಎಂ ಹೋಗಲಿಲ್ಲ. ವಾಗ್ದೇವಿ ಶಾಪದಿಂದಲೇ ಮುಡಾದಲ್ಲಿ ಸಿಎಂ ಸಿಕ್ಕಿಹಾಕಿಕೊಂಡಿದ್ದಾನೆ.
ಆದರೆ ವಿಜಯಪುದಲ್ಲಿ ಮತಾಂಧ ಮೌಲ್ವಿ ಮನೆಗೆ ಹಲ್ಲು ಕಿರಿಯುತ್ತಾ ಹೋಗುತ್ತಾನೆ ಎಂದು ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು. 2029ಕ್ಕೆ ಭಾರತವನ್ನು ಮುಸ್ಲಿಂ ರಾಷ್ಟ್ರ ಮಾಡಲಿದ್ದಾರೆ. ಅದಕ್ಕೆ ನಾವು ಎಚ್ಚೆತ್ತುಕೊಳ್ಳಬೇಕಿದೆ. ನಾವು ಜಾತಿ ಎಂದು ಹೋದರೆ ಕಡಿದು ಹಾಕುತ್ತಾರೆ. ಬಾಂಗ್ಲಾದಲ್ಲಿ ಏನಾಗುತ್ತಿದೆ ಅದಕ್ಕೆ ನಾವು ಎಚ್ಚೆತ್ತುಕೊಳ್ಳಬೇಕಿದೆ. ಈಗ ಹೋರಾಟ ಶುರುವಾಗಿದೆ, ಮುಂದೆ ಹೋರಾಟ ದೊಡ್ಡದಾಗಬೇಕು ಎಂದರು.