ಗದಗ ಜಿಲ್ಲಾ ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟ RUPSA ವತಿಯಿಂದ ಡಿಡಿಪಿಐ ಬುರಡಿಯವರು ಜಿಲ್ಲಾ ಉಪನಿರ್ದೇಶಕ ಹುದ್ದೆ ವಹಿಸಿಕೊಂಡ ನಿಮಿತ್ತ ಸನ್ಮಾನಿಸಲಾಯಿತು. ರಾಜ್ಯ ಪ್ರಧಾನ ಕಾರ್ಯದರ್ಶಿ ಶಶಿಧರ ದಿಂಡೂರ, ಗದಗ ಜಿಲ್ಲಾಧ್ಯಕ್ಷ ಜಯದೇವ ಮೆಣಸಗಿ, ಗದಗ ಜಿಲ್ಲಾ ಕಾರ್ಯದರ್ಶಿ ಎ.ಎಂ. ಢಾಲಾಯತ, ರೂಪ್ಸಾ ಸದಸ್ಯರಾದ ಗದಗಿನ, ಬಾತಾಖಾನಿ ಮಹೇಶ, ರಾಯಲ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎಸ್.ಎಸ್. ಕುಂಬಾರ, ಮೋಹನ ಬಳ್ಳಾರಿ ಹಾಗೂ ವಿ.ಡಿ.ಎಸ್.ಟಿ.ಸಿ. ಶಾಲೆಯ ಡೊಳ್ಳಿನ ಉಪಸ್ಥಿತರಿದ್ದರು.