ಮಕ್ಕಳಲ್ಲಿ ಸ್ಮಾರ್ಟ್‌ ಫೋನ್‌ ಚಟ ಬಿಡಿಸಲು ಈ ಟ್ರಿಕ್ ಫಾಲೋ ಮಾಡಿ!

0
Spread the love

ಇತ್ತೀಚಿನ ದಿನಗಳಲ್ಲಿ ಮಕ್ಕಳು ಸ್ಮಾರ್ಟ್ ಫೋನ್‌ ವ್ಯಸನಿಗಳಾಗಿದ್ದಾರೆ. ಫೋನ್‌ ಇಲ್ಲದೆ ಊಟ ಮಾಡುವುದಿಲ್ಲ ಎಂದು ಹಟ ಮಾಡಬಹುದು. ಅಲ್ಲದೆ, ಪೋಷಕರೇ ಮಗು ಸ್ವಲ್ಪ ಹಟ ಮಾಡಿದರೆ ಅವರನ್ನು ತ್ವರಿತವಾಗಿ ಸುಧಾರಿಸಲು ಮೊಬೈಲ್‌ಗಳನ್ನು ನೀಡುವುದುಂಟು.

Advertisement

ಇದರಿಂದ ಮಕ್ಕಳು- ಪೋಷಕರಿಗೆ ಹಾಗು ಪೋಷಕರಿಗೆ- ಮಕ್ಕಳು ದೂರವಾಗುತ್ತಿದ್ದಾರೆ. ವಾಸ್ತವವಾಗಿ, ಆನ್‌ಲೈನ್‌ ಪ್ರಪಂಚವು ಅತ್ಯಂತ ವ್ಯಸನಕಾರಿಯಾಗಿದೆ. ಇದು ಅತಿಯಾದರೆ ಮಗುವಿನ ಒಟ್ಟಾರೆ ಬೆಳವಣಿಗೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಹಾಗಾದರೆ ಈ ಚಟವನ್ನು ಹೇಗೆ ತಡೆಯಬೇಕು ಎಂಬುದನ್ನು ಇಲ್ಲಿ ತಿಳಿಯಿರಿ.

ಟೈಮ್ ಟೇಬಲ್ ಮಾಡಿಕೊಡಿ: ನೀವು ಮಕ್ಕಳಿಗೆ ಒಂದು ಟೈಮ್​ ಟೇಬಲ್ ಮಾಡಿಕೊಡುವುದು ಎಲ್ಲಾ ರೀತಿಯಿಂದಲೂ ಸಹಾಯ ಮಾಡುತ್ತದೆ. ಮೊಬೈಲ್ ಬಳಕೆಗೆ ದಿನಕ್ಕೆ ಅರ್ಧಗಂಟೆ ಮಾತ್ರ ಇಡಿ. ಹಾಗೆಯೇ ಓದಲು, ಆಟ ಆಡಲು, ಹೊರಗಿನ ಮಕ್ಕಳ ಜೊತೆ ಸೇರಲು ಸಹ ಅವರಿಗೆ ಸಮಯ ಮೀಸಲಿಡಿ. ಇದು ಮೊಬೈಲ್ ಬಳಕೆ ಕಡಿಮೆ ಮಾಡುತ್ತದೆ.

ಅವರಲ್ಲಿ ಹವ್ಯಾಸ ಬೆಳೆಸಿ: ಪ್ರತಿಯೊಬ್ಬ ಮಕ್ಕಳಲ್ಲಿ ಒಂದು ಹವ್ಯಾಸ ಇರುತ್ತದೆ. ಕೆಲವರಿಗೆ ಹಾಡುವುದು, ಚಿತ್ರ ಬಿಡಿಸುವುದು ಹೀಗೆ ಕೆಲವೊಂದು ಇಷ್ಟ ಇರುತ್ತದೆ. ಹಾಗೆಯೇ, ಕ್ರೀಡೆಯಲ್ಲಿ ಸಹ ಆಸಕ್ತಿ ಇರುತ್ತದೆ. ಯಾವುದು ಇಷ್ಟ ಎಂದು ಗುರುತಿಸಿ ಅದರಲ್ಲಿ ಅವರನ್ನು ಹೆಚ್ಚು ಕಾಲ ಸಮಯ ಕಳೆಯಲು ಪ್ರೋತ್ಸಾಹಿಸಿ.

ದೈಹಿಕ ಚಟುವಟಿಕೆ ಹೆಚ್ಚಿಸಿ: ಮಕ್ಕಳು ಮೊಬೈಲ್ ಹಿಡಿದು ಮನೆಯಲ್ಲಿ ಕುಳಿತರೆ ದೈಹಿಕ ಚಟುವಟಿಗೆ ಕಡಿಮೆ ಆಗಿ ರೋಗಗಳು ಸಹ ಬರುತ್ತದೆ. ಅಲ್ಲದೇ ಇತರರ ಜೊತೆ ಬೆರೆಯಲು ಸಹ ಬರುವುದಿಲ್ಲ. ಇದು ಮುಂದಿನ ದಿನಗಳಲ್ಲಿ ಸಮಸ್ಯೆ ಉಂಟು ಮಾಡುತ್ತದೆ. ಅದಕ್ಕಾಗಿ ಅವರಿಗೆ ಹೊರಗೆ ಹೋಗಿ ಆಟ ಆಡಲು ಹೇಳಿ, ವ್ಯಾಯಾಮ ಮಾಡಿಸಿ.

ನೀವು ಮಾದರಿ ಆಗಬೇಕು: ಮುಖ್ಯವಾಗಿ ಮಕ್ಕಳು ಪೋಷಕರನ್ನು ನೋಡಿ ಕಲಿಯುತ್ತಾರೆ. ಹಾಗಾಗಿ ನಿಮ್ಮ ಫೋನ್ ಬಳಕೆಯ ಮೇಲೆ ಸಹ ನಿಗಾ ಇಡಿ. ನೀವು ಮಕ್ಕಳ ಮುಂದೆ ಅತಿಯಾಗಿ ಫೋನ್ ಬಳಸಿದಾಗ, ಅವರೂ ಸಹ ಅದನ್ನೇ ಮಾಡುತ್ತಾರೆ.


Spread the love

LEAVE A REPLY

Please enter your comment!
Please enter your name here