ವಿಜಯಸಾಕ್ಷಿ ಸುದ್ದಿ, ಚನ್ನಪಟ್ಟಣ : ರಾಜ್ಯದಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ನಿಖಿಲ ಕುಮಾರಸ್ವಾಮಿ ಗೆಲುವು ಸಾಧಿಸಲಿದ್ದಾರೆ ಎಂದು ಜೆಡಿಎಸ್ ಪಕ್ಷದ ರಾಜ್ಯ ವಕ್ತಾರ ವೆಂಕನಗೌಡ ಆರ್.ಗೋವಿಂದಗೌಡ್ರ ಹೇಳಿದರು.
ಅವರು ನಿಖಿಲ್ ಕುಮಾರಸ್ವಾಮಿ ಅವರ ಪರ ಚನ್ನಪಟ್ಟಣ ಮತಕ್ಷೇತ್ರದಲ್ಲಿ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಂಡು ಮತ ಯಾಚನೆ ಮಾಡಿ, ಕಾಂಗ್ರೆಸ್ ಪಕ್ಷದ ಸುಳ್ಳುಗಳಿಗೆ ಈ ಹಿಂದೆ ಮೋಸ ಹೋದಂತೆ ಮತ್ತೆ ಮೋಸಕ್ಕೆ ಒಳಗಾಗಬಾರದೆಂದು ಜನತೆಗೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಶರಣಪ್ಪ ಹೂಗಾರ, ಬಸವರಾಜ ಅಪ್ಪನವರ, ಪ್ರಫುಲ್ ಪುಣೆಕರ್, ಗಿರೀಶ್ ಸಂಶಿ, ಜೋಸೆಫ್ ಉದೋಜಿ, ಪುಲಿಕೇಶಿ ಗಾಳಿ, ಮಂಜುಳಾ ಮೇಟಿ, ಹಾಗೂ ಗದಗ ಜಿಲ್ಲೆಯ ನೂರಾರು ಕಾರ್ಯಕರ್ತರು ನಿಖಿಲ್ ಕುಮಾರಸ್ವಾಮಿಯವರ ಪರವಾಗಿ ಮತಯಾಚನೆ ಮಾಡಿದರು.



