ಗದಗ ಪ್ರಿಮಿಯರ್ ಲೀಗ್-2 ಆರಂಭ

0
Gadag Premier League-2 begins
Spread the love

ವಿಜಯಸಾಕ್ಷಿ ಸುದ್ದಿ, ಗದಗ : ವಿಮಲ್ ರೆಸಾರ್ಟ್ ಪ್ರಾಯೋಜಕತ್ವದಲ್ಲಿ ಗದಗ ಪ್ರೀಮಿಯರ್ ಲೀಗ್ 2ನೇ ಆವೃತ್ತಿಯನ್ನು ಆನಂದ ಪೋತ್ನಿಸ್, ಪಿ.ಆರ್. ಅಡವಿ, ಹಾಗೂ ಭೂಷಣ ಶಾ ಉದ್ಘಾಟಿಸಿದರು.

Advertisement

ಮೊದಲ ಪಂದ್ಯ ಗದಗ ಕ್ರಷರ್ಸ್ ಮತ್ತು ಗದಗ ವಲ್ಚರ್ಸ್ ನಡುವೆ ನಡೆಯಿತು. ಕ್ರಷರ್ಸ್ ತಂಡ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿತು. ಕ್ರಷರ್ಸ್ ತಂಡದ ಪರ ಅನಿತ್ 25, ಕಾರ್ತಿಕ 21 ಹಾಗೂ ಅಲ್ತಮಷ್ 24 ರನ್ ಗಳಿಸಿದರು. ಬೌಲಿಂಗ್‌ನಲ್ಲಿ ವಲ್ಚರ್ಸ್ ಪರ ಪವನ 4 ಹಾಗೂ ವಿನಯ 2 ವಿಕೆಟ್ ಪಡೆದರು. ಉತ್ತರ ಬ್ಯಾಟಿಂಗ್‌ಗೆ ಇಳಿದ ವಲ್ಚರ್ಸ್ ತಂಡದ ವಿನಯ ಬಾರಕೇರ 27, ಜೇಯೇಶ 22 ರನ್ ಗಳಿಸಿದರು. ಬೌಲಿಂಗ್‌ನಲ್ಲಿ ಪ್ರಜ್ವಲ್ ಮಿಟ್ಟಿ 3, ರಾಮು ಬೆನಹಾಳ 3 ವಿಕೆಟ್ ಪಡೆದು ಮಿಂಚಿದರು. ಕ್ರಷರ್ಸ್ ತಂಡ 55 ರನ್‌ಗಳ ಸುಲಭ ಜಯ ಸಾಧಿಸಿತು. ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಪ್ರಜ್ವಲ್ ಮಿಟ್ಟಿ ಪಡೆದರು.

2ನೇ ಪಂದ್ಯ ಗದಗ ಟೈಟನ್ಸ್ ಹಾಗೂ ಗದಗ ಸ್ಟ್ರೈಕರ್ಸ್ ನಡುವೆ ನಡೆಯಿತು. ಗದಗ ಸ್ಟ್ರೈಕರ್ಸ್ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿತು. ಸ್ಟ್ರೈಕರ್ಸ್ ತಂಡದ ಪರ ಕಿರಣ ಆಸಂಗಿ 33, ರವಿ ರಾಮಗಿರಿ 19 ರನ್ ಮಾಡಿದರು.

ಸಮೀರ 2, ಕಾರ್ತಿಕ 1 ವಿಕೆಟ್ ಪಡೆದರು. ಉತ್ತರವಾಗಿ ಬ್ಯಾಟಿಂಗ್‌ಗೆ ಇಳಿದ ಟೈಟನ್ಸ್ ತಂಡ ಜೈದ ಅತ್ತಾರ 44, ಜರಿಯಾನ್ 27 ರನ್ ಗಳಿಸಿದರು. ಶಿವು ಹಾಗೂ ಸತೀಶಕುಮಾರ ತಲಾ ಒಂದು ವಿಕೆಟ್ ಪಡೆದರು. ಟೈಟನ್ಸ್ ತಂಡ 7 ವಿಕೆಟ್ ಜಯಗಳಿಸಿತು. ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಜೈದ ಅತ್ತಾರ ಪಡೆದರು.


Spread the love

LEAVE A REPLY

Please enter your comment!
Please enter your name here