ದೀರ್ಘಕಾಲದಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಕಾಲಿವುಡ್‌ನ ಖ್ಯಾತ ನಟ ಡೆಲ್ಲಿ ಗಣೇಶ್ ವಿಧಿವಶರಾಗಿದ್ದಾರೆ.
ತಮ್ಮ 80ನೇ ವಯಸ್ಸಿನಲ್ಲಿ ಅವರು ಇಹಲೋಕ ತ್ಯಜಿಸಿದ್ದಾರೆ. ತಮಿಳು ನಟ ಗಣೇಶ್ ಅವರ ಸಾವನ್ನು ಪುತ್ರ ಮಹದೇವನ್ ಅಧಿಕೃತವಾಗಿ ಮಾಧ್ಯಮಕ್ಕೆ ತಿಳಿಸಿದ್ದಾರೆ. ನಮ್ಮ ತಂದೆ ದೆಹಲಿ ಗಣೇಶ್ ನವೆಂಬರ್ 9 ರಂದು ರಾತ್ರಿ 11 ಗಂಟೆಗೆ ನಿಧನರಾದರು ಎಂದು ತಿಳಿಸಿದ್ದಾರೆ.
ಇನ್ನೂ ದೆಹಲಿ ಗಣೇಶ್ 1976 ರಲ್ಲಿ ಬಾಲಚಂದರ್ ಅವರ ‘ಪತ್ತಿನ ಪ್ರವೇಶಂ’ ಚಿತ್ರದ ಮೂಲಕ ವೃತ್ತಿಜೀವನ ಪ್ರಾರಂಭಿಸಿದರು. ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ 400ಕ್ಕೂ ಹೆಚ್ಚು ಚಿತ್ರಗಳಲ್ಲಿ ಗಣೇಶ್ ಕೆಲಸ ಮಾಡಿದ್ದರು.



