ಗದಗ:- ಸಾಂಪ್ರದಾಯವಾದಿ ಇಸ್ಲಾಂ ಧರ್ಮೀಯರು ಬಹಳ ಅಪಾಯಕಾರಿ ಎಂದು ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳು ಹೇಳಿಕೆ ಕೊಟ್ಟಿದ್ದಾರೆ.
ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದಲ್ಲಿ ವಕ್ಫ್ ಬೋರ್ಡ್ ವಿರುದ್ಧ ರೈತರು ನಡೆಸಿದ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ವಕ್ಫ್ ಬೋರ್ಡ್ ಕಾನೂನು ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.
ರಾಜ್ಯಾದ್ಯಂತ ಕೃಷಿ ಜಮೀನು, ಧಾರ್ಮಿಕ ಕೇಂದ್ರ, ಸರ್ಕಾರಿ ಜಾಗ ಹಾಗೂ ಸಾಮಾನ್ಯ ಜನರ ಆಸ್ತಿಯ ಪಹಣಿಯಲ್ಲಿ ವಕ್ಫ್ ಮಂಡಳಿ ಹೆಸರು ನಮೂದಾಗಿದೆ.
ಇದನ್ನು ವಿರೋಧಿಸಿ ಭಾರತಿಯ ಕಿಸಾನ ಸಂಘ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ.
ಈ ಧರ್ಮ ವಿಸ್ತಾರವಾದಿಗಳು ಯಾರನ್ನೂ ಉಳಿಸುವುದಿಲ್ಲ. ನಮ್ಮ ದೇಶದಲ್ಲಿ 600 ವರ್ಷಗಳಿಂದ ಇಸ್ಲಾಂ ಧರ್ಮದವರು ಆಳ್ವಿಕೆ ನಡೆಸಿದ್ದಾರೆ. ಅದರಲ್ಲಿ ದರ್ಗಾ ಎನ್ನುವುದು ಸೂಫಿ ಸಂತರ ಪರಂಪರೆಗೆ ಒಳಪಡುತ್ತದೆ. ಇವರು ಶಾಂತಿ, ಸಮಾನತೆ, ಸಹಬಾಳ್ವೆಯ ಸಂದೇಶವನ್ನು ಸಮೂಲ ಧರ್ಮದ ಲೋಪದೋಶಗಳನ್ನು ಎತ್ತಿ ತೋರಿಸಿದರು.
ನಮ್ಮ ದೇಶದ 12ನೇ ಶತಮಾನದ ಶರಣರಂತೆ ಸೂಫಿ ಸಂತರು ಉತ್ತಮ ಮೌಲ್ಯಗಳನ್ನು ಹಾಗೂ ಧರ್ಮದ ಲೋಪಗಳನ್ನು ಎತ್ತಿ ತೋರಿಸಿದ್ರು. ಆಗಿನ ಸಾಂಪ್ರದಾಯವಾದಿ ಇಸ್ಲಾಂ ಧರ್ಮೀಯರು, ರಾಜರು ಸೂಫಿ ಸಂತರನ್ನು ವಿರೋಧಿಸಿ ಹೊರಹಾಕಿದರು.
ಅರಬ್ ರಾಷ್ಟ್ರಗಳಿಂದ ಸಂಚಾರ ಮಾಡುತ್ತಾ ಭಾರತಕ್ಕೆ ಬಂದರು. ಇವರು ಒಳ್ಳೆಯ ಮೌಲ್ಯಗಳನ್ನು ಜಗತ್ತಿಗೆ ಸಾರಿದರು. ಆದರೆ ಮೂಲ ಸಾಂಪ್ರದಾಯವಾದಿ ಇಸ್ಲಾಂ ಧರ್ಮೀಯರು ಬಹಳ ಅಪಾಯಕಾರಿ ಎಂದು ಶ್ರೀಗಳು ಹೇಳಿದ್ದಾರೆ.
ಯಾವ ಧರ್ಮದಲ್ಲಿ ವಿಸ್ತಾರವಾಧಿತನ ಇರುತ್ತದೆಯೋ ಅವರು ಯಾರನ್ನೂ ಉಳಿಸುವುದಿಲ್ಲ. ಇವರು ನಾಶವಾಗಲಿ, ಅವರು ನಾಶವಾಗಲಿ ಎನ್ನುವ ಭಾವನೆ ಇರುತ್ತದೆ. ಆದ್ದರಿಂದ ಆ ಧರ್ಮದಲ್ಲಿರುವ ಮೌಲ್ಯಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಾವು ನಿಜವಾದ ಮಾನವರಾಗುತ್ತೇವೆ ಎಂದಿದ್ದಾರೆ.
ಈ ವೇಳೆ ನರೇಗಲ್ ಪಟ್ಟಣದ ರಹಿಮಾನ ಶಾವಲಿ ದರ್ಗಾದ ಸಯ್ಯದ್ ಮಂಜೂರ ಹುಸೇನ್ ಶ್ಯಾವಲಿ ಶರಣರು ಹಾಗೂ ವಿವಿಧ ಸಂಘಟನೆಗಳ ಮುಖಂಡರು, ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಿದರು.



