ಚಿತ್ರದುರ್ಗ:– ಜಗ್ಗೋದಿಲ್ಲ, ಬಗ್ಗೋದಿಲ್ಲ ಎಂದ ಸಿದ್ದರಾಮಯ್ಯ ಸೈಟ್ ವಾಪಸ್ ಕೊಟ್ಟಿದ್ಯಾಕೆ!? ಎಂದು ಛಲವಾದಿ ನಾರಾಯಣಸ್ವಾಮಿ ಪ್ರಶ್ನೆ ಮಾಡಿದ್ದಾರೆ.
Advertisement
ಈ ಸಂಬಂಧ ಮಾತನಾಡಿದ ಅವರು, ಕಾಂಗ್ರೆಸ್‌ನಿಂದ ಅಘೋಷಿತ ಕಾನೂನು ಜಾರಿ ಆದಂತಿದೆ. ಯಾರೆಷ್ಟು ಬೇಕಾದರೂ ಕದಿಯಬಹುದು, ಸಿಕ್ಕಿಬಿದ್ದಾಗ ವಾಪಸ್ ಕೊಟ್ಟರಾಯ್ತು. ದರೋಡೆ ಮಾಡಿದ್ದು ವಾಪಸ್ ಕೊಟ್ಟರೆ ಕ್ರಮ ಬೇಡವೇ ಎಂದರು.
ರಾಜ್ಯ ಸರ್ಕಾರದ ದಿನಕ್ಕೊಂದು ಹಗರಣ ಬಯಲಾಗುತ್ತಿವೆ. ಸಿಎಂ ಸಿದ್ದರಾಮಯ್ಯ ಮಾತ್ರ ರಾಜೀನಾಮೆ ನೀಡುತ್ತಿಲ್ಲ. ಜಗ್ಗೋದಿಲ್ಲ, ಬಗ್ಗೋದಿಲ್ಲ ಅಂದವರು ಸೈಟ್ ಯಾಕೆ ವಾಪಸ್ ಕೊಟ್ಟರು? ಪ್ರಿಯಾಂಕ್ ಖರ್ಗೆ 5 ಎಕರೆ ಜಾಗ ಯಾಕೆ ವಾಪಸ್ ಕೊಟ್ಟರು? ಹಾಗಿದ್ದರೆ ನಿಮ್ಮ ಮೇಲೇಕೆ ಕ್ರಮ ಬೇಡ ಎಂದು ವಾಗ್ದಾಳಿ ನಡೆಸಿದರು.