ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಇಡೀ ವಕ್ಫ್ ಕಾಯ್ದೆಯನ್ನು ರದ್ದುಪಡಿಸುವ ಮೂಲಕ ದೇಶದ ರೈತರು ನೆಮ್ಮದಿಯ ಜೀವನ ನಡೆಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಭಾರತೀಯ ಕಿಸಾನ್ ಸಂಘದ ತಾಲೂಕಾ ಘಟಕದ ವತಿಯಿಂದ ತಹಸೀಲ್ದಾರರ ಮೂಲಕ ಸೋಮವಾರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ನಾಗರಾಜ ಕುಲಕರ್ಣಿ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ಕೋಳಿವಾಡ, ರೈತರ ಜಮೀನುಗಳ, ಮಠ, ಮಂದಿರಗಳ ಆಸ್ತಿ ದಾಖಲೆಗಳಲ್ಲಿ ಪಹಣಿಯ ಕಾಲಂ ನಂ. 11ರಲ್ಲಿ ವಕ್ಫ್ ಬೋರ್ಡ್ ಆಸ್ತಿಯೆಂದು ನಮೂದಿಸಿರುವುದನ್ನು ತಕ್ಷಣವೇ ತೆಗೆದು ಹಾಕಬೇಕು.
ದೇಶದ ರೈತರ ಜಮೀನುಗಳನ್ನು ನುಂಗಿ ಬೀದಿಗೆ ತಳ್ಳಲು ಹೊಂಚು ಹಾಕಿರುವ ವಕ್ಫ್ ಬೋರ್ಡ್ ರೈತರಿಗೆ ಮೋಸ ಮಾಡುತ್ತಿದೆ ಎಂದರು.
ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಟಾಕಪ್ಪ ಸಾತಪುತೆ ಮಾತನಾಡಿ, ವಕ್ಫ್ ಬೋರ್ಡ್ ಮಾಡುತ್ತಿರುವ ಲ್ಯಾಂಡ್ ಜಿಹಾದ್‌ನಿಂದ ಜಗತ್ತಿಗೆ ಅನ್ನ ನೀಡುವ ರೈತರು ಕಂಗಾಲಾಗಿ ಹೋಗಿದ್ದಾರೆ. ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಸಾಕಷ್ಟು ಆಸ್ತಿಗಳು ಈಗಾಗಲೇ ವಕ್ಫ್ ಬೋರ್ಡ್ ಕೈವಶವಾಗಿವೆ. ಇದಕ್ಕೆಲ್ಲ ಸರ್ಕಾರವೇ ಹೊಣೆಯಾಗಿದೆ ಎಂದರು.
ಭಾರತೀಯ ಕಿಸಾನ್ ಸಂಘದ ಶಿರಹಟ್ಟಿ ತಾಲೂಕಾ ಘಟಕದ ಅಧ್ಯಕ್ಷ ಶಂಕರಗೌಡ ಪಾಟೀಲ, ಅಜಯ ಕರಿಗೌಡ್ರ, ವಸಂತಗೌಡ ಕರಿಗೌಡ್ರ, ಗಂಗಪ್ಪ ಛಬ್ಬಿ, ಬಸವರಾಜ ಬೆಂತೂರ, ಮಂಜುನಾಥ ಮಟ್ಟಿ, ಈರಪ್ಪ ತಳವಾರ, ಮೌನೇಶ ಗೌಳಿ, ಫಕ್ಕೀರೇಶ ಬಕ್ಕಸದ, ಫಕ್ಕೀರೇಶ ಕಲ್ಲಪ್ಪನವರ, ಅಶೋಕ ಮುಳಗುಂದ, ಶಿವಲಿಂಗಪ್ಪ ಕೋಡಿ, ಲಕ್ಷö್ಮಣ ಬೇರಗಣ್ಣವರ, ರಮೇಶ ವಾಲಿಕಾರ ಸೇರಿ ಅನೇಕ ರೈತರು ಉಪಸ್ಥಿತರಿದ್ದರು.