ಅಧ್ಯಕ್ಷರಾಗಿ ನಾಗರಾಜ ಹಳ್ಳಿಕೇರಿ ಆಯ್ಕೆ

0
Nagaraja Hallikeri was elected as the President
Spread the love

ವಿಜಯಸಾಕ್ಷಿ ಸುದ್ದಿ, ಮುಂಡರಗಿ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮುಂಡರಗಿ ತಾಲೂಕು ಶಾಖೆಯ ಪದಾಧಿಕಾರಿಗಳ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಪ್ರೌಢಶಾಲಾ ಶಿಕ್ಷಕ ನಾಗರಾಜ ಹಳ್ಳಿಕೇರಿ, ರಾಜ್ಯ ಪರಿಷತ್ ಸದಸ್ಯರಾಗಿ ಆರೋಗ್ಯ ಇಲಾಖೆಯ ಮಲ್ಲಿಕಾರ್ಜುನ ಕಲಕಂಬಿ, ಖಜಾಂಚಿಯಾಗಿ ಕೃಷಿ ಇಲಾಖೆಯ ಶ್ರೀಧರ ದಾನಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾ ಅಧಿಕಾರಿ ವಿ.ಎ. ರೋಣದ ತಿಳಿಸಿದ್ದಾರೆ.

Advertisement

ಅಧ್ಯಕ್ಷ, ರಾಜ್ಯಪರಿಷತ್ ಸದಸ್ಯ, ಹಾಗೂ ಖಜಾಂಚಿ ಸ್ಥಾನಗಳಿಗೆ ನಾಮಪತ್ರ ಸಲ್ಲಿಸಲು ನ.7 ಕೊನೆಯ ದಿನವಾಗಿತ್ತು. ನ.8ರಂದು ನಾಮಪತ್ರ ಪರಿಶೀಲನೆ ನಡೆಸಿ, ಮೂರು ಸ್ಥಾನಗಳಿಗೆ ತಲಾ ಒಬ್ಬ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾ ಅಧಿಕಾರಿಗಳು ಅಧಿಕೃತವಾಗಿ ಅವಿರೋಧ ಆಯ್ಕೆಯನ್ನು ಘೋಷಿಸಿ, ಪ್ರಮಾಣಪತ್ರ ವಿತರಿಸಿದರು.

ಈ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾಗಿರುವ ನಿರ್ದೇಶಕರು, ವಿವಿಧ ಇಲಾಖೆಗಳ ವೃಂದ ಸಂಘಗಳ ಅಧ್ಯಕ್ಷರು, ವಿವಿಧ ಇಲಾಖೆಯ ನೌಕರರು ಪಾಲ್ಗೊಂಡು ಶುಭಾಶಯ ಕೋರಿದರು.

Nagaraja Hallikeri was elected as the President Nagaraja Hallikeri was elected as the President

ನೂತನವಾಗಿ ಆಯ್ಕೆಯಾದ ನಿರ್ದೇಶಕರಾದ ನಾಗೇಂದ್ರ ಪಟ್ಟಣಶೆಟ್ಟಿ, ರಾಘವೇಂದ್ರ ಜೆ, ಬಸವಣ್ಣೆಪ್ಪ ಜಿ.ಬಿ, ಫಕೀರಸಾಬ ಕಲಕೇರಿ, ಶಂಕರ ಸರ್ವದೆ, ಜಗದೀಶ ಎ, ಮಹೇಶ ಅಲ್ಲಿಪುರ, ವಿ.ಎನ್. ಪೂಜಾರ, ಮೈಲಾರಪ್ಪ, ಮೃತ್ಯುಂಜಯ ವಿಭೂತಿ, ಎಸ್.ಎಸ್. ಮೇಟಿ, ವಾಯ್.ಎಸ್. ದಡವಾಡ, ಮಹಾಂತೇಶ ಹಲವಾಗಲಿ, ಮುದುಕಪ್ಪ ಸಂಸಿ, ಮಲ್ಲಿಕಾರ್ಜುನ ಬಾರಕೇರ, ವಿಠಲ ನಾವಳ್ಳಿ, ಹನುಮಂತ ಹಳ್ಳಿ, ಕಾಳಪ್ಪ ಬಡಿಗೇರ, ಎಂ.ಕೆ. ಸ್ವಾಮಿ, ಮಲ್ಲಿಕಾರ್ಜುನ ಹಿರೇಗೌಡರ, ಬಿ.ಕೆ. ಸಂಜೀವಪ್ಪನವರ, ಜಗದೀಶ ಗುಳ್ಳಾರಿ, ಹನುಮಂತಪ್ಪ ಹುಡೆದ, ಮೌಲಾಸಾಬ ಬನ್ನಿಕೊಪ್ಪ, ಎ.ಎಸ್. ಪಾಟೀಲ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಸ್.ಸಿ. ಹರ್ತಿ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಎ.ಡಿ. ಬಂಡಿ, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಂ. ಮಾಯಮ್ಮನವರ, ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಜಿ. ಪೂಜಾರ, ಸಂತೋಷ ಅಂಗಡಿ, ಶಿವಮೂರ್ತಿ ನಾಯಕ್, ಹನುಮಂತಪ್ಪ, ಆರ್.ಸಿ. ಪಟ್ಪೇದ, ಕಾಶೀನಾಥ ಶಿರಬಡಗಿ, ಎನ್.ಎಮ್. ಕುಕನೂರ, ಎಂ.ಪಿ. ಶೀರನಳ್ಳಿ, ಎಂ.ಎA. ಬಂಡಿ, ರಾಘವೇಂದ್ರ ಗುಡಗೂರ, ಮನೋಹರ ಎಸ್, ಹುಸೇನ ಕವಲೂರ, ಎಂ.ಬಿ. ಮೇಟಿ, ಭೋಜು ಲಮಾಣಿ, ಎಂ.ಎಸ್. ಶೀರನಳ್ಳಿ, ಖಾದರ ಛೋಪದಾರ, ಎ.ಎಮ್. ಪೂಜಾರ, ಎಲ್.ಎನ್. ದೊಡ್ಡಮನಿ, ರವಿ ದೆವರಡ್ಡಿ, ಮಲ್ಲಪ್ಪ, ಸೇರಿದಂತೆ ವಿವಿಧ ಇಲಾಖೆಯ ನೌಕರರು ಹಾಜರಿದ್ದರು.

ನೂತನವಾಗಿ ಆಯ್ಕೆಯಾದ ಅಧ್ಯಕ್ಷ ನಾಗರಾಜ ಹಳ್ಳಿಕೇರಿ ಮಾತನಾಡಿ, ನೌಕರರ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿ, ತಾಲೂಕಿನಲ್ಲಿ ಸುಸಜ್ಜಿತವಾದ ನೌಕರ ಭವನ ನಿರ್ಮಾಣ ಮಾಡಲು ಮೊದಲ ಆದ್ಯತೆಯನ್ನು ನೀಡಲಾಗುವುದು ಎಂದರಲ್ಲದೆ, ತಮ್ಮ ಆಯ್ಕೆಗೆ ಬೆಂಬಲಿಸಿದ ನಿರ್ದೇಶಕರಿಗೆ, ಎಲ್ಲ ಇಲಾಖೆಗಳ ವೃಂದ ಸಂಘಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ, ಅಧಿಕಾರಿಗಳಿಗೆ, ನೌಕರರಿಗೆ ಧನ್ಯವಾದಗಳನ್ನು ತಿಳಿಸಿದರು.


Spread the love

LEAVE A REPLY

Please enter your comment!
Please enter your name here