ಪ್ರತಿಯೊಬ್ಬರಿಗೂ ತನ್ನ ಮನೆ ಸ್ವಚ್ಛವಾಗಿರಬೇಕೆಂಬ ಆಸೆ ಇರುತ್ತದೆ, ಜಿರಳೆ ನಿಮ್ಮ ಮನೆಯಲ್ಲಿರದಂತೆ ನೋಡಿಕೊಳ್ಳುವುದು ಕಷ್ಟದ ಕೆಲಸವೇ, ಎಷ್ಟು ಸ್ವಚ್ಛತೆಯನ್ನು ಕಾಪಾಡಿಕೊಂಡರೂ ನಮಗೇ ತಿಳಿಯದಂತೆ ಮನೆಯ ಒಳಗೆ ಎಂಟ್ರಿ ಕೊಟ್ಟೇ ಬಿಡುತ್ತವೆ. ಈ ಜಿರಳೆಗಳ ಕಾಟದಿಂದ ಮುಕ್ತಿ ಪಡೆಯಲು ಹಲವಾರು ಸ್ಪ್ರೇಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಅದರ ಪರಿಮಳ ಆರೋಗ್ಯಕ್ಕೆ ಒಳ್ಳೆಯದಲ್ಲ. ಅದಕ್ಕಾಗಿ ಕೆಲ ಮನೆಮದ್ದುಗಳಿವೆ. ಇವುಗಳನ್ನು ಬಳಸಿ ಮನೆಯಿಂದ ಜಿರಳೆಗಳನ್ನು ಓಡಿಸಬಹುದು.
Advertisement
- ಪುಲಾವ್ ಎಲೆಗಳನ್ನು ಪುಡಿ ಮಾಡಿ ನೀರಿಗೆ ಬೆರೆಸಿ ಕುದಿಸಿ, ತಣ್ಣಗಾದ ಬಳಿಕ ಮನೆಯ ಮೂಲೆಗಳಲ್ಲಿ ಸಿಂಪಡಿಸಿದರೆ ಜಿರಳೆಗಳು ಅಲ್ಲಿಂದ ಓಡಿಹೋಗುತ್ತವೆ.
- ಸ್ಪ್ರೇ ಬಾಟಲಿಯಲ್ಲಿ ಸಮ ಪ್ರಮಾಣದಲ್ಲಿ ನಿಂಬೆ ರಸ ಮತ್ತು ನೀರನ್ನು ಮಿಶ್ರಣ ಮಾಡಿ ಅಡುಗೆಮನೆ ಹಾಗೂ ಮನೆಯ ಮೂಲೆಗಳಲ್ಲಿ ಸ್ಪ್ರೇ ಮಾಡಿದರೆ ಜಿರಳೆಗಳು ಸಾಯುತ್ತವೆ.
- ಅಡುಗೆ ಸೋಡಾ ಮತ್ತು ಸಕ್ಕರೆ ಮಿಶ್ರಣವನ್ನು ಬಾಟಲಿಗೆ ತುಂಬಿಸಿ ಅಡುಗೆಮನೆಯ ವಿವಿಧ ಭಾಗಗಳಲ್ಲಿ ಸಿಂಪಡಿಸಿದರೆ ಜಿರಳೆಗಳು ಇಲ್ಲವಾಗುತ್ತದೆ.
- ಜಿರಳೆಗಳು ಇರುವ ಜಾಗಕ್ಕೆ ಬೋರಿಕ್ ಆಸಿಡ್ ಪುಡಿಯನ್ನು ಸಿಂಪಡಿಸಿದರೆ ಅವುಗಳ ವಂಶವೇ ನಾಶವಾಗುತ್ತದೆ.
- ಬೇವಿನ ಎಣ್ಣೆಯನ್ನು ನೀರಿಗೆ ಬೆರೆಸಿ, ಅದನ್ನು ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ ಅಡುಗೆಮನೆಯ ಮೂಲೆಯಲ್ಲಿ ಸಿಂಪಡಿಸಿದರೆ ಜಿರಳೆಗಳು ಸಾಯುತ್ತವೆ.
- ಲವಂಗದ ಪುಡಿಯನ್ನು ಜಿರಳೆ ಇರುವ ಸ್ಥಳಗಳಿಗೆ ಹಚ್ಚಿದರೆ ಜಿರಳೆಗಳು ಇಲ್ಲವಾಗುತ್ತದೆ.