HomeGadag Newsಬಾಲ ಕವಯಿತ್ರಿಗೆ ಮೆಚ್ಚುಗೆಯ ಮಹಾಪೂರ

ಬಾಲ ಕವಯಿತ್ರಿಗೆ ಮೆಚ್ಚುಗೆಯ ಮಹಾಪೂರ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಕಾಸರಗೋಡು/ಗದಗ : ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್‌ನ ರಾಜ್ಯ ಘಟಕವು ಕೇರಳ ರಾಜ್ಯ ಘಟಕದ ಸಹಯೋಗದಲ್ಲಿ ಕೇರಳದ ಕಾಸರಗೋಡಿನಲ್ಲಿ ಏರ್ಪಡಿಸಿದ್ದ ಪ್ರಥಮ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನ ಹಾಗೂ ಕೇರಳ ಕರ್ನಾಟಕ ಮಕ್ಕಳ ಉತ್ಸವದ ಅಂಗವಾಗಿ ಜರುಗಿದ ರಾಜ್ಯಮಟ್ಟದ ವಿದ್ಯಾರ್ಥಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಗದುಗಿನ ಪ್ರತಿಭಾವಂತ ಬಾಲಕವಿಯತ್ರಿ ನಗರದ ಕೆ.ಎಲ್.ಇ. ಶಾಲೆಯ ವಿದ್ಯಾರ್ಥಿನಿ ಪ್ರಣತಿ ಆರ್.ಗಡಾದ ಇಡೀ ಸಮ್ಮೇಳನದ ಗಮನ ಸೆಳೆಯುವ ಮೂಲಕ ಗದುಗಿನ ಕೀರ್ತಿ ಪತಾಕೆಯನ್ನು ನೆರೆಯ ಕೇರಳ ರಾಜ್ಯದಲ್ಲೂ ಹಾರಿಸಿದ್ದಾರೆ.

ಖ್ಯಾತ ಪರಿಸರವಾದಿ ಚ.ನಾ ಅಶೋಕ ಅವರು ಉದ್ಘಾಟಿಸಿದ ವಿದ್ಯಾರ್ಥಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಣತಿ ಗಡಾದ, ಕರಾವಳಿ ಪ್ರದೇಶವನ್ನು ಮತ್ತು ಮಂಗಳೂರು, ಉಡುಪಿ ಜಿಲ್ಲೆಗಳನ್ನು ‘ಬಾಲ ಸಾಹಿತ್ಯದ ತೊಟ್ಟಿಲು’ ಎಂದು ಕನ್ನಡ ಸಾಹಿತ್ಯದಲ್ಲಿ ಗುರುತಿಸಲಾಗುತ್ತಿದೆ. ಮೊದಲ ಮುದ್ರಣ ಯಂತ್ರ ಕಾರ್ಯಾರಂಭ ಮಾಡಿದ್ದು, ಜೆ.ಮ್ಯಾಕ್ ಅವರು ಸಂಪಾದಿಸಿದ ಮೊದಲ ಮಕ್ಕಳ ಕೃತಿ ಬಾಲ ಗೀತೆಗಳು ಪ್ರಕಟವಾದದ್ದು ಮಂಗಳೂರಿನಲ್ಲಿಯೇ. ಗಡಿಭಾಗದ ಹಿರಿಯ ಸಾಹಿತಿಗಳಾದ ಡಾ. ಎಮ್.ಗೋವಿಂದ ಪೈ, ಪಂಜೆ ಮಂಗೇಶರಾಯರು, ಡಾ. ಶಿವರಾಮ ಕಾರಂತ, ಎಂ.ಎಸ್. ಕಾಮತ್, ಜಿ. ಎನ್. ಲಕ್ಷ್ಮಣ್ ಪೈ, ಕೆ.ವಿ. ತಿರುಮಲೇಶ್ ಮುಂತಾದವರು ಮಕ್ಕಳ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನನ್ಯವಾಗಿದೆ ಎಂದರು.

ಈ ಕವಿಗೋಷ್ಠಿಯಲ್ಲಿ ಕರ್ನಾಟಕ ಹಾಗೂ ಕೇರಳ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ 30 ಆಹ್ವಾನಿತ ಬಾಲ ಕವಿ, ಕವಯಿತ್ರಿಯರು ಮಕ್ಕಳ ಕವಿತೆಗಳನ್ನು ವಾಚಿಸಿದರು. ಇದೇ ಸಂದರ್ಭದಲ್ಲಿ ಕೇರಳ ರಾಜ್ಯ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನದ ಪರವಾಗಿ ಕೇರಳದ ಪ್ರಸಿದ್ಧ ಕವಿ, ಗಡಿನಾಡ ಚೇತನ ಪ್ರಶಸ್ತಿ ಪುರಸ್ಕೃತ ಸಾಹಿತಿ ರಾಧಾಕೃಷ್ಣ ಕೆ.ಉಳಿಯತಡ್ಕ, ಕೇರಳ ರಾಜ್ಯ ಘಟಕದ ಅಧ್ಯಕ್ಷ ಶಿವರಾಮ ಕಾಸರಗೋಡು ಹಾಗೂ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಿ.ಎನ್. ಅಶೋಕ ಅವರು ಪ್ರಣತಿ ಗಡಾದವರಿಗೆ ಪ್ರಶಸ್ತಿಪತ್ರ, ಫಲಕ ನೀಡಿ ಗೌರವಿಸಿದರು.

ಈ ಗೌರವಕ್ಕೆ ಪಾತ್ರರಾದ ಬಾಲ ಕವಿಯಿತ್ರಿ ಪ್ರಣತಿ ಅವರನ್ನು ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಸಿರಿಗನ್ನಡ ವೇದಿಕೆ, ಜಿಲ್ಲಾ ವಚನ ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಿಷತ್ತು, ಜಿಲ್ಲಾ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು, ಸಂಗಮ ಪ್ರಕಾಶನ ವೇದಿಕೆ ಮುಂತಾದ ಸಂಘಟನೆಗಳು ಅಭಿನಂದಿಸಿವೆ.

ಕವಿ ಏನೇ ಬರೆದರೂ ಅದರ ಹಿಂದೆ ನಿಸರ್ಗವಿದೆ. ಇಂಟರ್ನೆಟ್, ಗೂಗಲ್, ಮೊಬೈಲ್‌ನಲ್ಲಿ ಕಳೆದು ಹೋಗುತ್ತಿರುವ ಇಂದಿನ ವಿದ್ಯಾರ್ಥಿ ವೃಂದಕ್ಕೆ ಈ ರಾಜ್ಯಮಟ್ಟದ ಕವಿಗೋಷ್ಠಿ ಹೊಸ ಚೈತನ್ಯ ನೀಡಿದೆ. ಇಲ್ಲಿ ವಾಚಿಸಿದ ಕವಿತೆಗಳಲ್ಲಿ ಮೌಲಿಕತೆ, ನೈತಿಕತೆ, ರಾಷ್ಟ್ರೀಯತೆಯ ಅರಿವು ಮೂಡಿಸುವ ಹಲವಾರು ಅಂಶಗಳಿವೆ ಎಂದು ಹೇಳಿದ ಪ್ರಣತಿ ಗಡಾದ, ಕನ್ನಡ ಶಾಲೆಗಳ ಸ್ಥಿತಿಗತಿ ಕುರಿತಾದ ಸ್ವರಚಿತ ಕವಿತೆಯೊಂದನು ಓದಿ ತುಂಬಿದ್ದ ಅಪಾರ ಸಂಖ್ಯೆಯ ಮಕ್ಕಳ ಹಾಗೂ ಕಾವ್ಯ ಪ್ರೇಮಿಗಳ ಗಮನವನ್ನು ಸೆಳೆದಳು.

 


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!