ಶಿಗ್ಗಾವಿ, ಚನ್ನಪಟ್ಟಣ, ಸಂಡೂರು ಉಪಚುನಾವಣೆ: ಬಿಸಿಲು ಲೆಕ್ಕಿಸದೇ ಹಕ್ಕು ಚಲಾಯಿಸಿದ ಮತಬಾಂಧವರು!

0
Spread the love

ಬೆಂಗಳೂರು: ಆಡಳಿತಾರೂಢ ಕಾಂಗ್ರೆಸ್‌ ಮತ್ತು ಪ್ರತಿಪಕ್ಷಗಳ ನಡುವೆ ಜಿದ್ದಾಜಿದ್ದಿಗೆ ಕಾರಣವಾಗಿರುವ ಕರ್ನಾಟಕದ ಶಿಗ್ಗಾವಿ, ಚನ್ನಪಟ್ಟಣ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ಇಂದು ಉಪಚುನಾವಣೆ ಶಾಂತಿಯುತ ವಾಗಿ ನಡೆದಿದೆ.

Advertisement

ಈ ಬಾರಿ ಜಿದ್ದಾ ಜಿದ್ದಿನ ಕಣವಾಗಿ ಮಾರ್ಪಟ್ಟಿರುವ ಬೊಂಬೆ ನಾಡು ಚನ್ನಪಟ್ಟಣದಲ್ಲಿ ದಾಖಲೆಯ ಮತದಾನವಾಗಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿಪಿ ಯೋಗೇಶ್ವರ್ ಕಣದಲ್ಲಿದ್ರೆ, ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಕಣದಲ್ಲಿದ್ದು, ಇಬ್ಬರಿಗೂ ಇದು ಪ್ರತಿಷ್ಟೆಯ ಚುನಾವಣೆ ಆಗಿತ್ತು. ಅದರಂತೆ ಇಂದು ಮತದಾನ ಪ್ರಕ್ರಿಯೆ ಮುಗಿದಿದ್ದು, ಮತದಾರರು ಯಾರಿಗೆ ಆಶೀರ್ವದಿಸಿದ್ದಾರೆ ಎಂಬುವುದನ್ನು ಕಾದು ನೋಡಬೇಕು.

ಇನ್ನೂ ಸರಕಾರ ವರ್ಸಸ್ ಬೊಮ್ಮಾಯಿ ಪ್ಯಾಮಿಲಿ ನಡುವೆ ಬಿಗ್ ಪೈಟ್ ಸಾಕ್ಷಿಯಾಗಿದ್ದ ಶಿಗ್ಗಾವಿ ಉಪ ಕದನದಲ್ಲಿ ಇಂದು ಶಾಂತಿಯುತವಾಗಿ ಮತದಾನ ನಡೆದಿದೆ. ಕಣದಲ್ಲಿದ್ದ 8 ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದ್ದು, ಕಾಂಗ್ರೆಸ್ ಬಿಜೆಪಿ ನಡುವೆ ನೆಕ್ ಟು ನೆಕ್ ಹಣಾಹಣಿ ನಡೆದಿದೆ.ಶಿಗ್ಗಾವಿ ಉಪಚುನಾವಣೆ ಕದನದಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ್ ಬೊಮ್ಮಾಯಿ ಪುತ್ರ ಭರತ ಬೊಮ್ಮಾಯಿ ಹಾಗೂ ಕೈ ಅಭ್ಯರ್ಥಿ ಯಾಸೀರ್ ಖಾನ್ ನಡುವೆ ಬಿಗ್ ಪೈಟ್ ನಡೆದಿದ್ದು ಜಿದ್ದಾ ಜಿದ್ದಿನ ಕಣವಾಗಿ ಮಾರ್ಪಟ್ಟಿದೆ. ಇಂದು ಕ್ಷೇತ್ರದಾದ್ಯಂತ ಶಾಂತಿಯುತವಾಗಿ ಮತದಾನ ನಡೆದಿದೆ.

ಮುಂಜಾನೆಯಿಂದಲೆ ಮತಗಟ್ಟೆಯತ್ತ ದೌಡಾಯಿಸಿದ ಮತದಾರರು ತಮ್ಮ ಹಕ್ಕು ಚಲಾಯಿಸಿದ್ರು. ಮಧ್ಯಾಹ್ನದ ವೇಳೆ ಸುಡು ಬಿಸಿಲನ್ನು ಲೆಕ್ಕಿಸದೆ ತಮ್ಮ ಹಕ್ಕು ಚಲಾಯಿಸಿದರು. ಕೈ ಅಭ್ಯರ್ಥಿ ಯಾಸೀರ್ ಖಾನ್ ಶಿಗ್ಗಾವಿಯ ಮಾಮಲೆ ದೇಸಾಯಿ ಶಾಲೆಯ ಮತಗಟ್ಟೆಯಲ್ಲಿ ಹಾಗೂ ಬಿಜೆಪಿ ಅಭ್ಯರ್ಥಿ ಭರತ ಬೊಮ್ಮಾಯಿ ತಂದೆ ಹಾಗೂ ಕುಟುಂಬದ ಜೊತೆಗೆ ಬಂದು ಸರಕಾರಿ ಮಾದರಿ ಗಂಡು ಮಕ್ಕಳ ಶಾಲೆಯ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸದರು.

ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಹುಲಗೂರಿನಲ್ಲಿ ಮತದಾನ ಮಾಡಿದ್ರೆ ವಿದೇಶದಿಂದ ಬಂದ ಅನುಷಾ ಮತದಾನ ಮಾಡಿದ್ರೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮೊದಲ ಸಲ ಯುವ ಮತದಾರರು ಹಕ್ಕು ಚಲಾಯಿಸಿದರು. ಸವಣೂರಿನ ವಡ್ಡರ ಓಣಿಯಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಲ್ಲವೆಂದು ಮತದಾನ ಬಹಿಷ್ಕಾರ ಮಾಡಿ ಜನರು ಆಕ್ರೋಶ ಹೊರ ಹಾಕಿದ್ದಾರೆ. ಮತ್ತೊಂದೆಡೆ ಪಟ್ಟಣದ ದಂಡಿನಪೇಟೆಯಲ್ಲಿ ಹಕ್ಕುಪತ್ರ ನೀಡಿಲ್ಲ ಎನ್ನುವ ಕಾರಣಕ್ಕೆ ಜನರು ಮತದಾನ ಬಹಿಷ್ಕಾರ ಮಾಡಿದ್ದಾರೆ.

ಚುನಾವಣಾ ರಾಯಬಾರಿಯಾಗಿದ್ದ ಹನುಮಂತ ಲಮಾಣಿ ಬಿಗ್ ಬಾಸ್ ಗೆ ಹೋದ ಹಿನ್ನೆಲೆ ಮತದಾನದಿಂದ ದೂರ ಉಳಿದಿದ್ದು ಹನುಮಂತನ ತಂದೆ ತಾಯಿ ಮತದಾನ ಮಾಡಿದ್ರು. ಉಳಿದಂತೆ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ನಡೆದಿದ್ದು ಶೇಕಡಾ 80 ಕ್ಕೂ ಮತದಾನ ನಡೆಯುವ ಸಾದ್ಯತೆಯಿದೆ.


Spread the love

LEAVE A REPLY

Please enter your comment!
Please enter your name here