HomePolitics Newsಸರ್ಕಾರ ಅಭದ್ರ ಮಾಡಲು ಬಿಜೆಪಿಯವರು ಯಾವ ಮಟ್ಟಕ್ಕೆ ಬೇಕಾದ್ರೂ ಇಳಿಯುತ್ತಾರೆ: ಎಚ್ ಕೆ ಪಾಟೀಲ್

ಸರ್ಕಾರ ಅಭದ್ರ ಮಾಡಲು ಬಿಜೆಪಿಯವರು ಯಾವ ಮಟ್ಟಕ್ಕೆ ಬೇಕಾದ್ರೂ ಇಳಿಯುತ್ತಾರೆ: ಎಚ್ ಕೆ ಪಾಟೀಲ್

For Dai;y Updates Join Our whatsapp Group

Spread the love

ಬೆಂಗಳೂರು: ಸರ್ಕಾರ ಅಭದ್ರ ಮಾಡಲು ಬಿಜೆಪಿಯವರು ಯಾವ ಮಟ್ಟಕ್ಕೆ ಬೇಕಾದ್ರೂ ಇಳಿಯುತ್ತಾರೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರವನ್ನು ಅಸ್ಥಿರ ಮಾಡುವ ಪ್ರಯತ್ನಗಳ ಕುರಿತಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಗೊತ್ತಾದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಸರ್ಕಾರ ಅಭದ್ರ ಮಾಡೊಕ್ಕೆ ಬಿಜೆಪಿ ಅವರು ಯಾವ ಮಟ್ಟಕ್ಕೆ ಇಳಿಯುತ್ತಿದ್ದಾರೆ ಎಂದರು. ಇವರ ಕುತಂತ್ರಕ್ಕೆ ನಮ್ಮ ಶಾಸಕರು ಯಾರು ಒಳಗಾಗಲ್ಲ. ಆ ಕಡೆ ನಮ್ಮ ಶಾಸಕರು ತಲೆ ಕೂಡ ಹಾಕಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೋವಿಡ್ ಹಗರಣ ಬಗ್ಗೆ ನಿವೃತ್ತ ನ್ಯಾ. ಮೈಕಲ್ ಡಿ ಕುನ್ಹಾ ವರದಿ ಬಗ್ಗೆ ಮಾತನಾಡಿ, ಕೋವಿಡ್ ಜಗತ್ತಿಗೆ ಬಂದ ದೊಡ್ಡ ಗಂಡಾಂತರ. ಆಗ ಬಿಜೆಪಿಯವರು ಯಾವ ರೀತಿ ಆಡಳಿತ ಮಾಡಿದ್ರು. ಆಗ ರಾಜ್ಯದಲ್ಲಿ ಡೆತ್ ಆಡಿಟ್ ಅಂತಿತ್ತು, ಅದನ್ನ ಬಿಜೆಪಿ ಸರ್ಕಾರ ತೆಗೆದು ಹಾಕಿತ್ತು. ಈ ಹಗರಣದ ಬಗ್ಗೆ ಜಸ್ಟೀಸ್ ಡಿ ಕುನ್ಹಾ ಅವರ ನೇತೃತ್ವದಲ್ಲಿ ವರದಿ ಕೊಟ್ಡಿದ್ದಾರೆ. ಅದನ್ನು ಕ್ಯಾಬಿನೆಟ್ ನಲ್ಲಿ ಚರ್ಚಿಸುತ್ತೇವೆ ಎಂದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!