HomePolitics Newsಬಿಜೆಪಿ ಅಧಿಕಾರಕ್ಕೆ ಬಂದಮೇಲೆ ನೆಹರೂ ಅವರನ್ನ ಮೂಲೆ ಗುಂಪು ಮಾಡಿದ್ರು: ಸಿಎಂ ಸಿದ್ದರಾಮಯ್ಯ ಆರೋಪ

ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ನೆಹರೂ ಅವರನ್ನ ಮೂಲೆ ಗುಂಪು ಮಾಡಿದ್ರು: ಸಿಎಂ ಸಿದ್ದರಾಮಯ್ಯ ಆರೋಪ

For Dai;y Updates Join Our whatsapp Group

Spread the love

ಬೆಂಗಳೂರು: ಬಿಜೆಪಿ ಅವರು ಬಂದಮೇಲೆ ನೆಹರು ಅವರನ್ನ ಮೂಲೆ ಗುಂಪು ಮಾಡಿದ್ರು ಎಂದು  ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಮಾಜಿ ಪ್ರಧಾನಿ ದಿವಂಗತ ಜವಾಹರಲಾಲ್‌ ನೆಹರೂರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ನಮ್ಮ ದೇಶವನ್ನ 200 ವರ್ಷ ಬ್ರಿಟೀಷರು ಆಳಿದ್ರು.

600 ವರ್ಷ ಮೊಘಲರು ಆಳಿದ್ರು. ಸ್ವಾತಂತ್ರ್ಯ ಬಂದಾಗ ನಮ್ಮ ದೇಶ ಸಂಪದ್ಭರಿತವಾಗಿರಲಿಲ್ಲ ನೆಹರು 17 ವರ್ಷ ಭಾರತದ ಪ್ರಧಾನಿ ಆಗಿದ್ರು. ಈ ಹದಿನೇಳು ವರ್ಷದಲ್ಲಿ ಭಾರತಕ್ಕೆ ಆಧುನಿಕ ಸ್ಪರ್ಶ ನೀಡಿದರು. ಹೀಗಾಗಿ ಅವರನ್ನು ಆಧುನಿಕ ಭಾರತದ ಶಿಲ್ಪಿ ಎಂದೇ ಕರೆಯುತ್ತಾರೆ. ಮಿಶ್ರ ಎಕಾನಮಿ ಶುರುವಾಗಿದ್ದು ನೆಹರು ಕಾಲದಲ್ಲೇ. ದೇಶದಲ್ಲಿ ಅನೇಕ ಡ್ಯಾಮ್‌ಗಳು, ಕಾರ್ಖಾನೆ ಕೂಡ ನೆಹರು ಕಾಲದಲ್ಲೇ ಆಗಿದ್ದು.

ಬಿಜೆಪಿ ಅವರು ಬಂದಮೇಲೆ ನೆಹರು ಅವರನ್ನ ಮೂಲೆ ಗುಂಪು ಮಾಡಿದ್ರು. ನೆಹರು ಕಾಲದಲ್ಲಿ ಪಂಚವಾರ್ಷಿಕ ಮೂಲಕ ಹಲವು ಯೋಜನೆ ತರಲಾಗಿತ್ತು. ಅದನ್ನೀಗ ನೀತಿ ಆಯೋಗ ಮಾಡಿದ್ದಾರೆ. ಪಂಚವಾರ್ಷಿಕ ಯೋಜನೆ ಇದ್ದಾಗ ನಮಗೆ ಹೆಚ್ಚು ಅನುಕೂಲ ಆಗಿದೆ. ಈಗ ನೀತಿ ಆಯೋಗ ಮಾಡಿ ಜನರನ್ನ ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ನರೇಂದ್ರ ಮೋದಿಗೆ, ಬಿಜೆಪಿಗೆ ಸಮಾನತೆ ಬರುವುದು ಬೇಕಿಲ್ಲ. ಅದಕ್ಕೆ ಸಂವಿಧಾನ ಬದಲಾವಣೆ ಮಾಡಬೇಕು ಅಂತ ಹೊರಟವರು ಎಂದು ಹೇಳಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!