ಬೆಂಗಳೂರು:- ಹಿಟ್ ಅಂಡ್ ರನ್ ಗೆ 19 ವರ್ಷದ ಬೈಕ್ ಸವಾರ ಬಲಿಯಾಗಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ಜರುಗಿದೆ.
Advertisement
ತುಮಕೂರು ರಸ್ತೆಯ ಎಂಟನೇ ಮೈಲಿ ಬಳಿಯ ದೀಪಕ್ ಯೂಟರ್ನ್ ಬಳಿ ಅವಘಡ ಸಂಭವಿಸಿದೆ. ದ್ವಿಚಕ್ರ ವಾಹನ ಸವಾರನಿಗೆ ಟಿಪ್ಪರ್ ಡಿಕ್ಕಿಯಾಗಿದ್ದು, ಕೆಳಗೆ ಬಿದ್ದ ಬೈಕ್ ಸವಾರನ ಮೇಲೆ ಟಿಪ್ಪರ್ ಹರಿದಿರೊ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಅಪಘಾತವಾಗ್ತಿದ್ದಂತೆ ಟಿಪ್ಪರ್ ವಾಹನ ಚಾಲಕ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ಮೃತ ಬೈಕ್ ಸವಾರನನ್ನ ಅಜಯ್ ಎಂದು ಗುರುತಿಸಲಾಗಿದೆ.
ಅಜಯ್ ಮೂಲತಃ ಆಂಧ್ರದವನಾಗಿದ್ದು ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ. ಇನ್ನು ಡಿಕ್ಕಿ ಹೊಡೆದು ನಾಪತ್ತೆ ಆಗಿರುವ ಚಾಲಕನಿಗಾಗಿ ಪೀಣ್ಯ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.