ಬೆಂಗಳೂರು: ಬಿಪಿಎಲ್, ಎಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕಿಂಗ್ ನ್ಯೂಸ್ ಬಂದಿದೆ. ಹೌದು ರೇಷನ್ ಕಾರ್ಡ್ಗೆ ದೃಢೀಕರಣ ಮಾಡದೆ ಇರುವುದರಿಂದ ಬಿಪಿಎಲ್, ಎಪಿಎಲ್ ಕಾರ್ಡ್ ರದ್ದು ಮಾಡಲಾಗಿದೆ ಎಂದು ಆಹಾರ ಇಲಾಖೆ ತಿಳಿಸಿದೆ. ಇದಕ್ಕೂ ಮುನ್ನ ಲಕ್ಷಾಂತರ ಎಪಿಎಲ್ ಕಾರ್ಡ್ಗಳು ರದ್ದಾಗಿದ್ದು 60 ಸಾವಿರ ಬಿಪಿಎಲ್ ಕಾರ್ಡ್ಗಳನ್ನು ಎಪಿಎಲ್ಗೆ ಶಿಫ್ಟ್ ಮಾಡಲಾಗಿದೆ.
ರೇಷನ್ ಅಂಗಡಿಗೆ ತೆರಳಿದಾಗಲೇ ಈ ವಿಚಾರ ಬೆಳಕಿಗೆ ಬಂದಿದೆ. ರಾಜ್ಯದಲ್ಲಿ 22 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್ಗಳನ್ನು ರದ್ದುಪಡಿಸಿದ ಬೆನ್ನಲ್ಲೇ ಆಹಾರ ಇಲಾಖೆ ಈಗ ಎಪಿಎಲ್ ಕಾರ್ಡ್ದಾರರಿಗೂ ಬಿಸಿ ಮುಟ್ಟಿಸಿದೆ.
2019-2022ರ ವರೆಗೆ ರೇಷನ್ ಕಾರ್ಡ್ ಗೆ ಮತ್ತೆ e-KYC ಪ್ರಕ್ರಿಯೆ ಮಾಡಿಸುವಂತೆ ಇಲಾಖೆ ನಿಯಮ ಜಾರಿ ಮಾಡಿತ್ತು. ಈ ಸಂಧರ್ಭದಲ್ಲಿ ಶೇ. 80ರಷ್ಟು APL ಫಲಾನುಭವಿಗಳು e-KYC ಮಾಡಿಕೊಂಡಿದ್ದರು. ಇನ್ನುಳಿದ ಶೇ. 20 ರಷ್ಟು ಕಾರ್ಡ್ ದಾರರು ನ್ಯಾಯಬೆಲೆ ಅಂಗಡಿಗಳಿಗೆ ಹೋಗಿ e-KYC ಮಾಡಿಕೊಂಡಿರಲಿಲ್ಲ. ಅಂತವರ ಕಾರ್ಡ್ ಗಳು ರದ್ದಾಗಿವೆ.