ಭಕ್ತಿ ಪ್ರಧಾನ ‘ಶರಣರ ಶಕ್ತಿ’ ಸಿನಿಮಾ ನ.22ಕ್ಕೆ ರಾಜ್ಯಾದ್ಯಂತ ರಿಲೀಸ್

0
Spread the love

ಶ್ರೀಶಾ ಫಿಲ್ಮ್ ಹುಬ್ಬಳ್ಳಿ ಅರ್ಪಿಸುವ  ‘ಶರಣರ ಶಕ್ತಿ’ ತಡಿವ್ಯಾರ ನೋಡು ! ಭಕ್ತಿ ಪ್ರಧಾನ ಕನ್ನಡ ಚಲನಚಿತ್ರ ನ.೨೨ಕ್ಕೆ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ ಎಂದು ನಿರ್ದೇಶಕ ದಿಲೀಪ ಶರ್ಮ ಹೇಳಿದರು.  

Advertisement

ಹುಬ್ಬಳ್ಳಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಕಲಾವಿದರು, ತಂತ್ರಜ್ಞರು, ನಿರ್ಮಾಪಕರು ನಿರ್ಮಿಸಿ ನಿರ್ದೇಶಿಸಿರುವ ಸಂಪೂರ್ಣ ಉತ್ತರ ಕರ್ನಾಟಕದ ೧೪೦ಕ್ಕೂ ಮಿಕ್ಕಿ ಕಲಾವಿದರೇ ಇರುವ ಚಿತ್ರವಾಗಿದೆ. ವಿಶ್ವಗುರು ಬಸವಣ್ಣ ಹಾಗೂ ಚಿನ್ಮಯಿಜ್ಞಾನಿ ಚನ್ನಬಸವಣ್ಣ ಅವರ ೧೨ನೇ ಶತಮಾನದ ಸಮಾನತೆ ಸಾರುವ ಬಹು ನಿರೀಕ್ಷಿತ ಭಕ್ತಿಪ್ರಧಾನ ಚಿತ್ರ ಇದಾಗಿದೆ. ಕಾಯಕದಲ್ಲಿ ನಿರತರಾದ ಅನೇಕ ಶರಣರನ್ನು ತೋರಿಸುವ ಚಿತ್ರವೇ ಶರಣರ ಶಕ್ತಿಯಾಗಿದೆ ಎಂದರು.

ಮಿಶ್ರಿಕೋಟಿ, ಕಾಮಧೇನು, ಗಂಜಿಗಟ್ಟಿ, ಹುಬ್ಬಳ್ಳಿ, ಧಾರವಾಡ, ಉಳವಿ, ಬಸವಕಲ್ಯಾಣ, ಬೀದರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಶರಣರು ಸಂಚರಿಸಿದ ಹಾದಿಗಳನ್ನು ಗುರುತಿಸಿ ಚಿತ್ರೀಕರಣ ನಡೆಸಲಾಗಿದೆ.     ಜಗಜ್ಯೋತಿ ಬಸವಣ್ಣನವರಾಗಿ ಮಂಜುನಾಥಗೌಡ್ರು ಪಾಟೀಲ, ಚನ್ನಬಸವಣ್ಣನವರಾಗಿ ರಂಜನ್‌ರಾಜ್, ಅಕ್ಕನಾಗಮ್ಮ ಪಾತ್ರದಲ್ಲಿ ಆರಾಧನಾ ಕುಲಕರ್ಣಿ, ಗಂಗಾAಬಿಕೆಯಾಗಿ ಸಂಗೀತಾ ವಸಂತ, ನೀಲಾಂಬಿಕೆ ಅಮೃತಾ ಸವಡಿ ಜೋಶಿ, ಅಕ್ಕಮಹಾದೇವಿಯಾಗಿ ರಮ್ಯಾ ಗೌಡ್ರು, ಬಿಜ್ಜಳನಾಗಿ ರಾಘವೇಂದ್ರ ಕಬಾಡಿ, ಅಲ್ಲಮಪ್ರಭುವಾಗಿ ಮಂಜುನಾಥಯ್ಯ ಬಿ.ಎಮ್, ಸಿದ್ಧರಾಮರಾಗಿ ಸಚಿನ್ ಮಾಗಣಗೇರಿ, ಮಾಜಿಶಾಸಕ, ರಂಗಕರ್ಮಿ ರಾಮಕೃಷ್ಣ ದೊಡ್ಡಮನಿ ಹರಳಯ್ಯನಾಗಿ, ವಿಶ್ವೇಶ್ವರಿ ಹಿರೇಮಠ ಕಲ್ಯಾಣಮ್ಮನಾಗಿ, ಪಾಲಿಕೆ ಸದಸ್ಯ ಚೇತನ ಹಿರೆಕೆರೂರ ಬಿಜ್ಜಳನ ಮಗನಾಗಿ, ಮೀನಾಕ್ಷಿ ಒಂಟಮೂರಿ ದಾನಮ್ಮನಾಗಿ, ಸುರೇಶ ಗೋಕಾಕ ಮಲ್ಲಯ್ಯನಾಗಿ, ಶರಣೆ ಸಂಕವ್ವೆಯಾಗಿ ಭುವನ ಸುಂದರಿ ಕಿರೀಟ ಮುಡಿಗೇರಿಸಿಕೊಂಡ ಡಾ.ಶ್ರುತಿ ಹೆಗಡೆ, ಪತ್ರಕರ್ತರಾದ ರವಿಕಾಂತ ಅಂಗಡಿ ಮೊದಲಾದವರು ಮನೋಜ್ಞವಾಗಿ ಅಭಿನಯಿಸಿದ್ದಾರೆ…ಎಂದು ಮಾಹಿತಿ ನೀಡಿದರು.


Spread the love

LEAVE A REPLY

Please enter your comment!
Please enter your name here