ಸಹಕಾರಿ ಕ್ಷೇತ್ರದಲ್ಲಿ ನಿಸ್ವಾರ್ಥ ಹಾಗೂ ಪ್ರಾಮಾಣಿಕ ಸೇವೆ ಸಲ್ಲಿಸಿದಾಗ ಮಾತ್ರ ಬೆಳೆಯಲು ಸಾಧ್ಯ: ಗೋವಿಂದಗೌಡ ಪಾಟೀಲ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ:  ಕೃಷಿಯನ್ನೇ ಬದುಕಾಗಿಸಿಕೊಂಡಿರುವ ಗ್ರಾಮೀಣ ಭಾಗದ ರೈತರನ್ನು ಕೃಷಿ ಸಂಬಂಧಿತ ವೃತ್ತಿ ಕ್ಷೇತ್ರಗಳಲ್ಲಿ ತೊಡಗಿಸಿ ಅವರ ಆರ್ಥಿಕ, ಸಾಮಾಜಿಕ ಗುಣಮಟ್ಟ ಹೆಚ್ಚಿಸುವಲ್ಲಿ ಸಹಕಾರಿ ಕ್ಷೇತ್ರದ ಅಗತ್ಯತೆ ಬಹಳಷ್ಟಿದೆ ಕೆಸಿಸಿ ಬ್ಯಾಂಕ್ ನಿರ್ದೇಶಕ ಗೋವಿಂದಗೌಡ ಪಾಟೀಲ ಹೇಳಿದರು.

Advertisement

ಅವರು ರಾಮಗೇರಿ ಗ್ರಾಮದ ಗ್ರಾ.ಪಂ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಗದಗ ಜಿಲ್ಲಾ ಸಹಕಾರ ಯೂನಿಯನ್, ಸಹಕಾರ ಇಲಾಖೆ ಗದಗ, ಕೆಸಿಸಿ ಬ್ಯಾಂಕ್ ಧಾರವಾಡ, ಕೆ.ಎಂ.ಎಫ್ ಧಾರವಾಡ ಗದಗ ಉಪವಿಭಾಗ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ರಾಮಗೇರಿ, ಶಿರಹಟ್ಟಿ ಮತ್ತು ಲಕ್ಮೇಶ್ವರ ತಾಲೂಕಿನ ಸಹಕಾರ ಸಂಘಗಳು ಮತ್ತು ಬ್ಯಾಂಕುಗಳ ಸಂಯುಕ್ತಾಶ್ರಯದಲ್ಲಿ ಮಂಗಳವಾರ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಹಕಾರಿ ಸಂಸ್ಥೆಗಳು ಜನರ ಮತ್ತು ಸರ್ಕಾರದ ನಡುವೆ ಸೇತುವೆಯಾಗಿಯೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆ. ಸಹಕಾರಿ ಕ್ಷೇತ್ರದಲ್ಲಿ ನಿಸ್ವಾರ್ಥ ಹಾಗೂ ಪ್ರಾಮಾಣಿಕ ಸೇವೆ ಸಲ್ಲಿಸಿದಾಗ ಮಾತ್ರ ಅದು ಬೆಳೆಯಲು ಸಾಧ್ಯವಾಗುತ್ತದೆ. ಸಹಕಾರಿ ಕ್ಷೇತ್ರ ಬೆಳೆಯಲು ಸಮುದಾಯಯದ ಪಾತ್ರ ಮುಖ್ಯವಾಗಿದೆ. ಸಹಕಾರಿ ಸಂಘದ ಮೂಲವೇ ಗದಗ ಜಿಲ್ಲೆಯಾಗಿದ್ದು, ಇದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಸಹಕಾರಿ ಸಂಘಗಳಲ್ಲಿ ಪಾರದರ್ಶಕತೆ ಇರಬೇಕು. ಸಹಕಾರಿ ಸಂಘಗಳು ಬೆಳೆಯುವಲ್ಲಿ ಎಲ್ಲರ ಸಹಕಾರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.

ಬಸಣ್ಣ ಬೆಟಗೇರಿ ಅವರು ಸಹಕಾರಿ ಸಂಘಗಳು ಹುಟ್ಟು ಹಾಗೂ ಬೆಳವಣಿಗೆ ಕುರಿತು ಮಾತನಾಡಿದರು. ರಾಮಗಿರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಹೇಂದ್ರ ಬೆಟಗೇರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ವಿ.ಜಿ. ಕುಲಕರ್ಣಿ, ಗ್ರಾ.ಪಂ ಅಧ್ಯಕ್ಷೆ ಅಡಿವೆಕ್ಕ ಬೆಟಗೇರಿ, ಸುಷ್ಮಾ ಕಡಿವಾಣ, ಎಚ್.ಎ. ಬಂಡೆಣ್ಣವರ, ಚನ್ನಬಸಪ್ಪ ಲಿಂಗಶೆಟ್ಟಿ, ಶೇಖಣ್ಣ ಕಾಳೆ, ಕೆ.ಸಿ. ಕೂಸನೂರಮಠ, ಬಿ.ಆರ್. ನಿಡಗುಂದಿ, ವಿ.ವಿ. ಪಡಸಲಗಿ, ವಿಶ್ವನಾಥ ಲಮಾಣಿ, ಪುನೀತ್ ಓಲೆಕಾರ, ರವೀಂದ್ರ ಗೊಜಗೋಜಿ, ಪರಸಪ್ಪ ಗೊಂದಿ, ಫಕ್ಕೀರಪ್ಪ ಕಾಳೆ, ಪರಶುರಾಮ ಲಕ್ಕಣ್ಣವರ, ಶಿವಾನಂದ ಕಳ್ಳಿಮಠ, ಅಶೋಕ ಹುಣಿಸಿಮರದ, ಶಿವಾನಂದ ಕಡೆಮನಿ, ಕಲ್ಲವ್ವ ಬಾಲಣ್ಣವರ, ಲಕ್ಮೀಶ್ವರ ಬೆಟಗೇರಿ ಇದ್ದರು. ಶಿಕ್ಷಕಿ ಮೈತ್ರಾದೇವಿ ಹಿರೇಮಠ ಉಪನ್ಯಾಸ ನೀಡಿದರು. ಚಂದ್ರಶೇಖರ ಕರಿಯಪ್ಪನವರ ನಿರೂಪಿಸಿದರು.


Spread the love

LEAVE A REPLY

Please enter your comment!
Please enter your name here