2A ಮೀಸಲಾತಿಗೆ ಆಗ್ರಹಿಸಿ ಡಿ. 10ರಂದು ಸುವರ್ಣ ಸೌಧ ಮುತ್ತಿಗೆ: ಜಯ ಮೃತ್ಯುಂಜಯ ಶ್ರೀ ಕರೆ!

0
Spread the love

ವಿಜಯನಗರ:- ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಡಿ. 10ರಂದು ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕೋಣ ಎಂದು ಜಯ ಮೃತ್ಯುಂಜಯ ಶ್ರೀ ಕರೆ ಕೊಟ್ಟಿದ್ದಾರೆ.

Advertisement

ಹೊಸಪೇಟೆಯಲ್ಲಿ ಮಾತನಾಡಿದ ಶ್ರೀಗಳು, ನಮ್ಮ ಸಮಾಜದ ಋಣ ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರದ ಮೇಲಿದೆ. ಹೀಗಾಗಿ ಆ ಋಣ ತೀರಿಸಲು ಮೀಸಲಾತಿ ಜಾರಿ ಮಾಡಲಿ ಎಂದರು.

ವಿಜಯನಗರದ ರಾಜಧಾನಿ ಹೊಸಪೇಟೆಯಿಂದಲೇ ನಮ್ಮ ಸಮಾಜಕ್ಕೆ ನಾನು ಕರೆ ನೀಡುವೆ. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಹೋರಾಟಕ್ಕೆ ಕೈ ಜೋಡಿಸಿ. ಡಿ. 10ರಂದು ರಂದು ಸುವರ್ಣಸೌಧಕ್ಕೆ ಮುತ್ತಿಗೆ ಹಾಕೋಣ. ಲಕ್ಷ, ಲಕ್ಷ ಪಂಚಮಸಾಲಿಗಳು ಬೆಳಗಾವಿಗೆ ಬರ್ತಾರೆ, 5 ಸಾವಿರ ಟ್ರಾಕ್ಟರ್ ಗಳು ಸೌಧಕ್ಕೆ ತರ್ತಾರೆ. ಹೀಗಾಗಿ ನೀವು ಬೆಂಬಲಿಸಿ ಎಂದು ಶ್ರೀಗಳು ಮನವಿ ಮಾಡಿದ್ದಾರೆ.

ಸಮಾಜದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನಾವು ಮೀಸಲಾತಿ ಹೋರಾಟ ಮಾಡ್ತಾನೆ ಇದ್ದೇವೆ. 7ನೇ ಹಂತದ ಹೋರಾಟ ಮಾಡ್ತಿದ್ದೇವೆ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೀಸಲಾತಿ ಜಾರಿ ಮಾಡುತ್ತದೆ ಅನ್ನೋ ನಂಬಿಕೆ ಇತ್ತು. ಆದ್ರೆ ಆ ನಂಬಿಕೆ ಹುಸಿಯಾಗಿದೆ,

ಈ ಹಿಂದೆ ಯಡಿಯೂರಪ್ಪ, ಬೊಮ್ಮಾಯಿ ಅವರ ಕಾಲದಲ್ಲಿಯೂ ಮುತ್ತಿಗೆ ಹಾಕಿದ್ದೇವೆ. ಸರಕಾರ ಮೀಸಲಾತಿ ಭರವಸೆ ಕೊಡಲಿ. ನೀತಿ ಸಂಹಿತೆ ನೆಪ ಮಾಡಿ ಬೇಸರವಾಗುವಂತೆ ಸಭೆ‌ ಮಾಡಿದರು. ಪಂಚಮಸಾಲಿ ಮೀಸಲಾತಿ ಹೋರಾಟದ ಫಲವಾಗಿ ಸರ್ಕಾರ ಬಂದಿದೆ‌.

ಮಕ್ಕಳು, ಸಮಾಜದ ಪರವಾದ ಹೋರಾಟ ಇದು. ಯಾರ ಲಾಬಿಗೂ ಮಣಿಯದೇ ಪ್ರಾಮಾಣಿಕ ಹೋರಾಟ ಮಾಡುತ್ತೇವೆ. ಸಿಎಂ ಮೀಸಲಾತಿ ಸ್ಪಷ್ಟತೆ ಕೊಡುವವರೆಗೆ ಹೊರಾಟ ಮಾಡಲಾಗುತ್ತದೆ. ಕುತಂತ್ರಗಳಿಗೆ ಮಣಿಯಬೇಡಿ ಎಂದು ಸಮಾಜಕ್ಕೆ ಶ್ರೀಗಳು ಕರೆ ಕೊಟ್ಟಿದ್ದಾರೆ.

ರಾಜ್ಯದಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತಿದ್ದೇನೆ, ಹೋರಾಟಕ್ಕೆ ಬೆಂಬಲ ಕೊಡಬೇಕು‌‌. ಪಕ್ಷಾತೀತವಾಗಿ ಸಮಾಜದ ಪರವಾಗಿ ಹೋರಾಟ ಮಾಡಿ. ನಮ್ಮ ಜೊತೆ ಬಂದರೆ ನಿಮ್ಮ ಅಧಿಕಾರಕ್ಕೆ ಕುತ್ತು ಬರುವುದಾದರೆ ಬಹಿರಂಗವಾಗಿ ಬರದೆ ಅಧಿವೇಶನದಲ್ಲಿ ಸಮಾಜದ ಪರವಾಗಿ ಧ್ವನಿ ಎತ್ತಿ ಎಂದು ಕರೆ ಕೊಟ್ಟಿದ್ದಾರೆ.

ಇದೇ ವೇಳೆ ರಾಜ್ಯದಲ್ಲಿ ವಕ್ಪ್ ಆಸ್ತಿ ವಿವಾದ ವಿಚಾರವಾಗಿ ಮಾತನಾಡಿದ ಶ್ರೀಗಳು, ವಕ್ಫ್ ವಿಚಾರ- ಆಯಾ ಧರ್ಮದ ಅಭಿವೃದ್ಧಿ ಮಂಡಳಿ. ಆ ಧರ್ಮಕ್ಕೆ ಸಂಬಂಧಿಸಿದ ಅಭಿವೃದ್ಧಿ ಕೆಲಸ ಮಾಡಲಿ. ಅನ್ನ ಕೊಡುವ ಅಮಾಯಕ ರೈತರ ಭೂಮಿ ಕಸಿಯುವ ಹುನ್ನಾರ ಮಾಡಬೇಡಿ.

ಅನ್ಯಾಯದ ಅಕ್ರಮ ಭೂಮಿ ಒಡೆತನಕ್ಕೆ ವಿರೋಧವಿದೆ. ರೈತರಿಗೆ ಅನ್ಯಾಯವಾದಾಗ ಅವರ ಪರವಾಗಿಯೇ ಇರುತ್ತೇವೆ ಎಂದು ಜಯಮೃತ್ಯುಂಜಯ ಶ್ರೀಗಳು ಹೇಳಿಕೆ ಕೊಟ್ಟಿದ್ದಾರೆ.


Spread the love

LEAVE A REPLY

Please enter your comment!
Please enter your name here