ಸಂಗೀತಾ ಮಾಂತ್ರಕ ಎ.ಆರ್.ರೆಹಮಾನ್ ಹಾಗೂ ಪತ್ನಿ ಸೈರಾ ಭಾನು 29 ವರ್ಷಗಳ ಸುಧೀರ್ಘ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ. ಇಬ್ಬರು ಬೇರೆ ಬೇರೆಯಾಗುತ್ತಿರುವ ಸುದ್ದಿಯಲ್ಲಿ ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ. ಸೈರಾ ಭಾನು ಡಿವೋರ್ಸ್ ಕುರಿತು ಮಾಹಿತಿ ನೀಡಿದ ಕೆಲವೇ ಗಂಟೆಗಳಲ್ಲಿ ರೆಹಮಾನ್ ತಂಡದ ಸದಸ್ಯೆ ಮೋಹಿನಿ ಡೇ ಕೂಡ ತಮ್ಮ ಪತಿಗೆ ವಿಚ್ಚೇದನ ನೀಡಿದ್ದಾಗಿ ಹೇಳಿದ್ದಾರೆ. ಅನೇಕರು ಈ ಎರಡು ಪ್ರಕರಣಗಳನ್ನು ಮಧ್ಯೆ ಲಿಂಕ್ ಮಾಡಿದ್ದರು. ಇದೀಗ ಈ ಬಗ್ಗೆ ಸೈರಾ ಭಾನು ವಕೀಲರ ಮೂಲಕ ಸ್ಪಷ್ಟನೆ ನೀಡಿದ್ದಾರೆ.
‘ಈ ಎರಡೂ ಪ್ರಕರಣಗಳ ಮಧ್ಯೆ ಯಾವುದೇ ಕನೆಕ್ಷನ್ ಇಲ್ಲ. ಸೈರಾ ಹಾಗೂ ರೆಹಮಾನ್ ಅವರದ್ದು ಇದು ಸ್ವಂತ ನಿರ್ಧಾರ’ ಎಂದು ಹೇಳಿದ್ದಾರೆ ಸೈರಾ ಪರ ವಕೀಲೆ ವಂದನಾ. ‘ಮದುವೆ ಆಗಿ ಹಲವು ವರ್ಷಗಳ ಬಳಿಕ ಜೀವನದಲ್ಲಿ ಏರಿಳಿತ ಇದ್ದೇ ಇರುತ್ತದೆ. ಇಬ್ಬರೂ ಒಳ್ಳೆಯ ರೀತಿಯಲ್ಲಿ ಸಂಬಂಧ ಕೊನೆ ಮಾಡಿಕೊಂಡಿದ್ದಾರೆ. ಒಬ್ಬರಿಗೊಬ್ಬರು ಬೆಂಬಲ ನೀಡಿಕೊಳ್ಳುವುದಾಗಿ ಹೇಳಿದ್ದಾರೆ’ ಎಂದಿದ್ದಾರೆ ಸೈರಾ.
ಸದ್ಯ ವಂದನಾ ಅವರು ಸೈರಾ ಹಾಗೂ ರೆಹಮಾನ್ ಅವರ ಸಂಬಂಧ ಕೊನೆ ಆಗಲು ಕಾರಣ ಏನು ಎಂಬುದನ್ನು ರಿವೀಲ್ ಮಾಡಿಲ್ಲ. ‘ಅವರ ವಿಚ್ಛೇದನವು ಸೌಹಾರ್ದಯುತವಾಗಿದೆ ಮತ್ತು ಸದ್ಯಕ್ಕೆ ಹಣಕಾಸಿನ ಅಂಶದ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇನ್ನೂ ರೆಹಮಾನ್ ತಂಡದ ಜೊತೆ ಗುರುತಿಸಿಕೊಂಡಿರುವ ಕೋಲ್ಕತ್ತಾ ಮೂಲಕ 29 ವರ್ಷದ ಮೋಹಿನಿ ಬಾಸಿಸ್ಟ್ ಪ್ಲೇಯರ್ ಆಗಿದ್ದು, ಗಾನ್ ಬಾಂಗ್ಲಾ ಅವರ ವಿಂಡ್ ಆಫ್ ಚೇಂಜ್ನಲ್ಲಿನ ಅಭಿನಯಕ್ಕಾಗಿ ಹೆಸರುವಾಸಿಯಾಗಿದ್ದಾರೆ. ವಿಶ್ವಾದ್ಯಂತ 40 ಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ರೆಹಮಾನ್ ಅವರೊಂದಿಗೆ ಮೋಹಿನಿ ನೀಡಿದ್ದಾರೆ. ಆಗಸ್ಟ್ 2023 ರಲ್ಲಿ ಅವರ ಚೊಚ್ಚಲ ಆಲ್ಬಂ ಅನ್ನು ಬಿಡುಗಡೆ ಮಾಡಿದ್ದಾರೆ.