ಬೆಂಗಳೂರು: ವಿದ್ಯಾರ್ಥಿಗಳ ಮೇಲೆ ಕೇಸ್ ಹಾಕಿದ್ರೆ ನಾವೇನು ಕಡ್ಲೇಕಾಯಿ ತಿನ್ನುತ್ತಾ ಇರ್ತೇವಾ ಎಂದು ಮಾಜಿ ಸಚಿವ ರೇಣುಕಾಚಾರ್ಯ ಮಧು ಬಂಗಾರಪ್ಪಗೆ ಎಚ್ಚರಿಕೆ ಕೊಟ್ಟಿದ್ದಾರೆ. ನಗರದಲ್ಲಿ ಶಿಕ್ಷಣ ಸಚಿವರಿಗೆ ಕನ್ನಡ ಬರಲ್ಲ ಎಂದಿದ್ದಕ್ಕೆ ವಿದ್ಯಾರ್ಥಿ ವಿರುದ್ಧ ಕ್ರಮಕ್ಕೆ ಮಧು ಬಂಗಾರಪ್ಪ ಸೂಚನೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು,
ಒಬ್ಬ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಮಗನಾಗಿ ಸಮಾಧಾನದಿಂದ ಉತ್ತರಿಸಬೇಕಿತ್ತು. ಬದಲಾಗಿ ವಿದ್ಯಾರ್ಥಿ ಮೇಲೆ ದೌರ್ಜನ್ಯದ ಮಾತಾಡಿದ್ದಾರೆ. ಇದೊಂದು ತೊಘಲಕ್ ದರ್ಬಾರ್. ಹುಷಾರ್.. ವಿದ್ಯಾರ್ಥಿಗಳ ಮೇಲೆ ಕೇಸ್ ಹಾಕಿದ್ರೆ ನಾವೇನು ಕಡ್ಲೇಕಾಯಿ ತಿನ್ನುತ್ತಾ ಇರ್ತೇವಾ. ಹುಷಾರ್ ಎಂದು ಎಚ್ಚರಿಕೆ ಕೊಟ್ಟಿದ್ದಾರೆ..
ಇನ್ನೂ ವಕ್ಫ್ ವಿಚಾರವಾಗಿ ಮಾತನಾಡಿದ ಅವರು, ವಕ್ಫ್ ಅಲ್ಲೋಲಕಲ್ಲೋಲ ಲಾಗಿದೆ. ಬಿಜೆಪಿ (BJP) ಹೋರಾಟದ ನಂತರ ವಾಪಸ್ ಮಾಡುವುದಾಗಿ ಹೇಳಿದ್ದೀರಿ. ಆದರೆ ಕಲಂ 11ರಲ್ಲಿ ಬದಲಾವಣೆ ಆಯ್ತಾ? ಎಸ್ಸಿ, ಎಸ್ಟಿಗಳ 27 ಸಾವಿರ ಕೋಟಿ ರೂ. ಹಣ ವಾಪಸ್ ಪಡೆದಿದ್ದೀರಿ ಯಾಕೆ? ಸುಳ್ಳಿಗೆ, ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರು ಕಾಂಗ್ರೆಸ್. ಒಬ್ಬ ಬಡವ ಆಸ್ಪತ್ರೆಗೆ ಹೋದರೆ ಬಿಪಿಎಲ್ ಕಾರ್ಡ್ ಕೇಳುತ್ತಾರೆ. ಸರ್ಕಾರಕ್ಕೆ ಎಚ್ಚರಿಕೆ ಕೊಡುತ್ತೇನೆ. ಹಳ್ಳಿಹಳ್ಳಿಯಲ್ಲೂ ಜಾಗೃತಿ ಮೂಡಿಸುತ್ತೇವೆ ಎಂದು ಕಿಡಿಕಾರಿದರು.