ಮೈಸೂರು: ಉಪ ಚುನಾವಣೆಯಲ್ಲಿ ನಿಮಗೆ ಅಚ್ಚರಿ ಆಗುವಂತಹ ಫಲಿತಾಂಶ ಬರುತ್ತದೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ನಾಳೆ ಉಪಚುನಾವಣೆಯ ಮೂರೂ ಕ್ಷೇತ್ರಗಳ ಫಲಿತಾಂಶ ಬರಲಿದೆ.
Advertisement
ಉಪ ಚುನಾವಣೆಯಲ್ಲಿ ನಿಮಗೆ ಅಚ್ಚರಿ ಆಗುವಂತಹ ಫಲಿತಾಂಶ ಬರುತ್ತದೆ. ಮೂರಕ್ಕೆ ಮೂರು ಸ್ಥಾನವನ್ನ ಕಾಂಗ್ರೆಸ್ ಗೆಲ್ಲಲ್ಲಿದೆ ಎಂದು ಗೃಹ ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಮಹಾರಾಷ್ಟ್ರದಲ್ಲೂ ನಮ್ಮದೇ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ. ಎಕ್ಸಿಟ್ ಪೋಲ್ ಕೂಡಾ ನಮ್ಮ ಪರವಾಗಿ ಹೇಳಿದ್ದಾರೆ. ಅದರ ಮೇಲೆ ಫಲಿತಾಂಶ ನಿರ್ಧಾರವಾಗುವುದಿಲ್ಲ, ಆದರೆ ಎರಡು ಸಂಸ್ಥೆಗಳು ನಮ್ಮ ಮೈತ್ರಿ ಗೆಲ್ಲುತ್ತೆ ಅಂತ ಹೇಳಿದೆ ಎಂದರು.