ಬೆಂಗಳೂರು: EVM ಹ್ಯಾಕ್ʼನಿಂದಲೇ ಮಹಾರಾಷ್ಟ್ರ ಕಳೆದುಕೊಂಡಿದ್ದೇವೆ ಅನ್ನಿಸುತ್ತಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಂಬಿಕೆ ಬರಬೇಕು ಅಂತ ಕೆಲವು ರಾಜ್ಯಗಳಲ್ಲಿ ಇವಿಎಂ ಹ್ಯಾಕ್ ಮಾಡುವುದಿಲ್ಲ.
ಇವಿಎಂ ಹ್ಯಾಕ್‌ನಿಂದಲೇ ಮಹಾರಾಷ್ಟ್ರ ಕಳೆದುಕೊಂಡಿದ್ದೇವೆ ಅನ್ನಿಸುತ್ತಿದೆ. ಸ್ಟ್ರಾಟಜಿ ಮಾಡುವುದರಲ್ಲಿ ಕೂಡ ನಾವು ಫೇಲ್ ಆಗಿದ್ದೇವೆ. ಇವಿಎಂ ಇರುವ ತನಕ ಅವರೇ ಗೆಲ್ಲುತ್ತಾರೆ ಅನ್ನಿಸುತ್ತದೆ. ಬ್ಯಾಲೆಟ್ ಪೇಪರ್ ಬರಬೇಕು ಅಂತ ನಾವು ಮೊದಲಿನಿಂದಲೂ ಒತ್ತಾಯ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಇನ್ನೂ ನಮ್ಮ ರಾಜ್ಯದಲ್ಲಿ ಯಡಿಯೂರಪ್ಪ ಬಳಿಕ ದೊಡ್ಡ ನಾಯಕತ್ವ ಇರಲಿಲ್ಲ. ಅದಕ್ಕೆ ಬಿಟ್ಟರು, ಹ್ಯಾಕ್ ಮಾಡೋದ್ರಲ್ಲಿ ಬಿಜೆಪಿಗರು ನಿಪುಣರು, ಜಾರ್ಖಂಡನಲ್ಲಿ ಜೆಎಂಎಂ ಬರುತ್ತೆ ಅಂತ ಬಿಟ್ಟರು. ಕಾಂಗ್ರೆಸ್ ಬರುತ್ತೆ ಅಂತಿದ್ರೆ ಅಲ್ಲೂ ಮಾಡ್ತಿದ್ರು. ಇವಿಎಂ ಬೇಡ ಅಂತ ನಾವು ಸುಪ್ರೀಂ ಕೋರ್ಟ್ ಹೋದರೂ ಆಗಲಿಲ್ಲ. ಅವರು ಸಹ ಎಲೆಕ್ಷನ್ ಕಮೀಷನ್ ಹೇಳಿದ್ದನ್ನ ಒಪ್ಪಿಕೊಂಡರು ಎಂದು ಹೇಳಿದರು.