ಕೊಪ್ಪಳ: ವಕ್ಫ್ ವಿರುದ್ಧ ಹೋರಾಟಕ್ಕೆ ನಾನು ದುಮುಕಿದ್ದೇನೆ ಎಂದು ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ರೈತರ ಜಮೀನಲ್ಲಿ ವಕ್ಫ್ ಹೆಸರು ಸೇರಿದ ವಿಚಾರವಾಗಿ ಕೊಪ್ಪಳದಲ್ಲಿ ಮಾತನಾಡಿದ ಅವರು, ವಕ್ಫ್ ವಿರುದ್ಧ ಹೋರಾಟಕ್ಕೆ ನಾನು ದುಮುಕಿದ್ದೇನೆ. ಈಗಾಗಲೇ ಹಲವು ಮನವಿಗಳನ್ನು ಕೊಟ್ಟಿದ್ದೀವಿ. ಸಿಎಂ ಅವರು ವಕ್ಫ್ ವಾಪಸ್ ತೆಗೆದುಕೊಂಡಿದ್ದಾರೆ. ಆದರೆ ಪಹಣಿಯಲ್ಲ ಹೆಸರು ತೆಗೆದಿಲ್ಲ. ವಿಜಯಪುರದಲ್ಲಿ ಮಾತ್ರ ಬಂದ್ ಆಗಿದೆ ಬೇರೆ ಕಡೆ ಆಗುತ್ತಿದೆ ಎಂದು ಹೇಳಿದರು.
ಇನ್ನೂ ಸರ್ಕಾರ ನಮ್ಮ ಸಮುದಾಯದಿಂದಲೇ ಅಧಿಕಾರಕ್ಕೆ ಬಂದಿದೆ. ಈಗಾಗಲೇ ನಾವು ರಾಜ್ಯದಾದ್ಯಂತ ಪ್ರವಾಸ ಕೈಗೊಂಡಿದ್ದೇವೆ. ನಮ್ಮ ಸಮುದಾಯದ ಶಾಸಕರು ಇದುವರೆಗೂ ಯಾವುದೇ ರೀತಿಯ ಧ್ವನಿ ಎತ್ತಿಲ್ಲ. ಈಗ ನಡೆಯುವ ಅಧಿವೇಶನದಲ್ಲಿ ಧ್ವನಿ ಎತ್ತಿ, ಇಲ್ಲವಾದರೆ ನಮ್ಮ ಹೋರಾಟಕ್ಕೆ ಬೆಂಬಲ ನೀಡಿ. ಬೆಳಗಾವಿಯಲ್ಲಿ ಹೋರಾಟಕ್ಕೆ ಮುತ್ತಿಗೆ ಹಾಕಲು ರೂಪ ರೇಷಗಳನ್ನು ಹಾಕಲಾಗುತ್ತಿದೆ ಎಂದರು.