ಮೈಸೂರು:- ಕೋಲು ಮಂಡೆ ಜಂಗುಮದೇವ’ ಖ್ಯಾತಿಯ 74 ವರ್ಷದ ಕಂಸಾಳೆ ಕುಮಾರಸ್ವಾಮಿ ನಿಧನ ಹೊಂದಿದ್ದಾರೆ.
Advertisement
ಇವರು ನಟ ಶಿವರಾಜ್ ಕುಮಾರ್ ಅಭಿನಯದ ‘ಜನುಮದ ಜೋಡಿ’ ಚಿತ್ರದ ‘ಕೋಲು ಮಂಡೆ ಜಂಗುಮದೇವ’ ಹಾಡಿಗೆ ಕುಮಾರಸ್ವಾಮಿ ಕಂಸಾಳೆ ಸಂಗೀತದ ನೃತ್ಯ ಸಂಯೋಜಿಸಿದ್ದರು.
ಆ ಮೂಲಕ ವರನಟ ರಾಜಕುಮಾರ್ ಅವರ ಮೆಚ್ಚುಗೆಗೆ ಪಾತ್ರವಾಗಿದ್ದರು. 2020ನೇ ಸಾಲಿನ ಜಾನಪದ ಅಕಾಡೆಮಿ ಪ್ರಶಸ್ತಿ ಪಡೆದಿದ್ದ ಅವರು, ಇಟಲಿ, ರೋಂ, ಟರ್ಕಿ ಸೇರಿದಂತೆ ದೇಶ– ವಿದೇಶಗಳಲ್ಲಿ 600ಕ್ಕೂ ಹೆಚ್ಚಿನ ಪ್ರದರ್ಶನಗಳನ್ನು ನೀಡಿದ್ದರು.
ಇನ್ನೂ ಅವರಿಗೆ ಪುತ್ರರಾದ ಕಂಸಾಳೆ ರವಿಚಂದ್ರ, ಕಂಸಾಳೆ ಮಾದೇವ್ ಕುಮಾರ, ಪುತ್ರಿಯರಾದ ರೂಪಾ, ಪಾರ್ವತಿ ಇದ್ದಾರೆ. ಅಂತ್ಯಕ್ರಿಯೆಯು ಇಂದು ಬೆಳಿಗ್ಗೆ 11ಕ್ಕೆ ಚಾಮುಂಡಿ ಬೆಟ್ಟದ ತಪ್ಪಲಿನ ಸ್ಮಶಾನದಲ್ಲಿ ನಡೆಯಲಿದೆ.
ಕುಮಾರಸ್ವಾಮಿ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ.