ವಿಜಯಸಾಕ್ಷಿ ಸುದ್ದಿ, ಗದಗ: ಹುಲಕೋಟಿ ಕೆ.ಎಚ್. ಪಾಟೀಲ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆಯ ವತಿಯಿಂದ ಡಾ. ಎಚ್.ಕೆ. ಪಾಟೀಲ ಸೇವಾ ತಂಡದ ಸಂಯೋಗದಲ್ಲಿ ಗದಗ-ಬೆಟಗೇರಿ ನಗರಸಭ್ಯ ವಾರ್ಡ್ ನಂ. ೫ರ ನರಸಾಪೂರ ಆಶ್ರಯ ಕಾಲೋನಿಯಲ್ಲಿ ಉಚಿತ ನೇತ್ರ ತಪಾಸಣೆ ನಡೆಸಿ, 15ಕ್ಕೂ ಹೆಚ್ಚು ಜನರನ್ನು ಶಸ್ತ್ರಚಿಕಿತ್ಸೆಗೆ ಕಳುಹಿಸಲಾಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಎಚ್.ಕೆ. ಪಾಟೀಲ ಸೇವಾ ತಂಡದ ಕ್ಯಾಪ್ಟನ್‌ರಾದ ಶಕೀರ ಕಾತರಕಿ ಮಾತನಾಡಿ, ಬಡವರ ಆರೋಗ್ಯ ಹಿತದೃಷ್ಟಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಬಿಪಿ, ಶುಗರ್ ಇತರೆ ಕಾಯಿಲೆಗಳ ತಪಾಸಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದು ಬಡವರಿಗೆ ಅತ್ಯಂತ ಉಪಯೋಗದಾಯಕವಾಗಿದೆ. ಅಲ್ಲದೇ ಕಣ್ಣಿನಲ್ಲಿ ದೋಷವಿದ್ದವರಿಗೆ ಕಣ್ಣಿನ ಶಸ್ತçಚಿಕಿತ್ಸೆಗಾಗಿ ಕಳುಹಿಸಲಾಗಿದೆ. ಇದೆಲ್ಲವನ್ನೂ ಉಚಿತವಾಗಿ ಮಾಡಿಕೊಡಲಾಗುತ್ತಿದೆ. ಇದು ನಮ್ಮ ಗದಗ ಜಿಲ್ಲೆಯ ಉಸ್ತುವಾರಿ ಸಚಿವರಾದ ಹೆಚ್.ಕೆ. ಪಾಟೀಲರವರ ಜನಪರ ಕಾಳಜಿ ಎಂದರು.
ಕಾಂಗ್ರೆಸ್ ಮೀನುಗಾರಿಕೆ ವಿಭಾಗದ ಮುಂಚೂಣಿ ಘಟಕದ ಅಧ್ಯಕ್ಷರಾದ ಸಂಗಮೇಶ ಹಾದಿಮನಿ ಮಾತನಾಡಿ, ಬಡವರ ಪಾಲಿನ ಕಣ್ಮಣಿಯಾದ ಎಚ್.ಕೆ. ಪಾಟೀಲ ಜನಪರ ವೈದ್ಯಕೀಯ ಸೇವೆಯೊಂದಿಗೆ ಇತರೆ ಸೇವೆಗಳನ್ನು ತಲಪುಸುತ್ತಿರುವುದು ಬಡವರ ಮುಖದಲ್ಲಿ ಮಂದಹಾಸ ಮೂಡಿಸಿದೆ ಎಂದರು.
ಈ ಸಂದರ್ಭದಲ್ಲಿ ನಾಗರಾಜ ಮುಳ್ಳಾಳ, ಸಾಗರ ಪವಾಡಶೆಟ್ಟರ್ ಸೇರಿದಂತೆ ಬಡಾವಣೆಯ ಯುವಕರು, ಹಿರಿಯರು ಉಪಸ್ಥಿತರಿದ್ದರು.



