ಚಿತ್ರದುರ್ಗ:- ಇಲ್ಲಿನ ಶಾಂತಿನಗರದ ಜನವಸತಿ ಪ್ರದೇಶಕ್ಕೆ ಕರಡಿ ನಿತ್ಯ ಬರುತ್ತಿದ್ದು, ಕೋಟೆನಾಡಿನ ನಾಗರಿಕರಲ್ಲಿ ಆತಂಕ ಶುರುವಾಗಿದೆ.
Advertisement
ಇಲ್ಲಿನ ಜನರು ಬೆಳಗ್ಗೆ ಹಾಗೂ ಸಂಜೆ ಇದೇ ರಸ್ತೆಯಲ್ಲಿ ವಾಯುವಿಹಾರಕ್ಕೆ ಬರುತ್ತಾರೆ. ಅಲ್ಲದೇ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಹ ಇಲ್ಲಿಯೇ ಒಡಾಡುತ್ತಾರೆ. ನಿತ್ಯ ಮನೆ ಪಾಠಕ್ಕೆ ತೆರಳುತ್ತಾರೆ. ಆದರೆ ಕಳೆದ ಒಂದು ವಾರದಿಂದ ಈ ಬಡಾವಣೆ ಪಕ್ಕದಲ್ಲಿರುವ ಬನ್ನಿಮರದ ಬಳಿಗೆ ಕರಡಿಯೊಂದು ಬರುತ್ತಿದೆ. ಅಲ್ಲಿ ಕೈಗೆ ಸಿಗುವ ಆಹಾರ ಸೇವಿಸಿ ಪರಾರಿಯಾಗುತ್ತದೆ.
ಇನ್ನೂ ಕರಡಿಯ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ. ಕರಡಿ ಓಡಾಟದ ವೀಡಿಯೋ ವೀಕ್ಷಿಸಿರುವ ಬಡಾವಣೆಯ ಜನರಲ್ಲಿ ಭೀತಿ ಸೃಷ್ಠಿಯಾಗಿದೆ. ಹೀಗಾಗಿ ಮನೆಯಿಂದ ಹೊರಬರಲು ನಾಗರಿಕರು ಹಿಂದೇಟು ಹಾಕುತ್ತಿದ್ದಾರೆ.
ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.