ಬೆಂಗಳೂರು: ನಿಖಿಲ್ ನನ್ನು ಕುಮಾರಸ್ವಾಮಿ ಬಲಿಪಶು ಮಾಡಿದ್ದಾರೆಂಬ ಮಾತಿಗೆ ಅರ್ಥವೇ ಇಲ್ಲ ಎಂದು ಶಾಸಕ ಹೆಚ್ ಡಿ ರೇವಣ್ಣ ಹೇಳಿದರು. ವಿಧಾನಸೌಧದಲ್ಲಿಂದು ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಮಹಾರಾಷ್ಟ್ರದಲ್ಲಿ ದಯನೀಯ ಸೋಲು ಕಂಡಿಲ್ಲವೇ? ನಿಖಿಲ್ ನನ್ನು ಕುಮಾರಸ್ವಾಮಿ ಬಲಿಪಶು ಮಾಡಿದ್ದಾರೆಂಬ ಮಾತಿಗೆ ಅರ್ಥವೇ ಇಲ್ಲ,
ವಿಧಿಯಿಲ್ಲದೆ ಅವನನ್ನು ಸ್ಪರ್ಧೆಗಿಳಿಸಬೇಕಾಯಿತು ಅಂತ ಕುಮಾರಸ್ವಾಮಿ ಹೇಳಿಲ್ಲವೇ? ಕೇವಲ 15 ದಿನ ಪ್ರಚಾರ ಮಾಡಿಯೂ ನಿಖಿಲ್ 85,000 ವೋಟು ಪಡೆದಿದ್ದಾನೆ, ಅದು ಸಾಧನೆಯಲ್ಲವೇ? ಅವನ ಭಾಷಣಗಳನ್ನು ಕೇಳಿದ್ದೇನೆ, ಉತ್ತಮ ಸಂಸದೀಯ ಪಟುಗಳ ಹಾಗೆ ಮಾತಾಡುತ್ತಾನೆ, ಸೋಲಿನಿಂದ ಅವನು ಧೃತಿಗೆಟ್ಟಿಲ್ಲ, ಚುನಾವಣೆಯಲ್ಲಿ ಸೋಲು ಗೆಲುವು ಮುಖ್ಯ ಅಲ್ಲ ಎಂದು ಹೇಳಿದರು. ಇನ್ನೂ ಕುಮಾರಸ್ವಾಮಿ ವಿರುದ್ಧ ಜಿಟಿ ದೇವೇಗೌಡ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು,
2017 ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ಜಿ.ಟಿ ದೇವೇಗೌಡರನ್ನ ಬಂಧನ ಮಾಡಲು ಸಿದ್ಧತೆ ಮಾಡಿಕೊಂಡಿತ್ತು. ಈ ವಿಷಯವನ್ನು ನನಗೆ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ರು. ಬಳಿಕ ಕುಮಾರಸ್ವಾಮಿ ಅವರು ಪೊಲೀಸರಿಗೆ ಫೋನ್ ಮೂಲಕ ಗುಟುರು ಹಾಕಿದ್ರು. ಕುಮಾರಸ್ವಾಮಿಯವರ ಒಂದೇ ಒಂದು ಗುಟುರಿಗೆ ಪೊಲೀಸರು ಜಿ.ಟಿ ದೇವೇಗೌಡರನ್ನ ಅರೆಸ್ಟ್ ಮಾಡೋದು ಬಿಟ್ಟರು. ಇಲ್ಲದೇ ಹೋಗಿದ್ರೆ ನನ್ನ ರೀತಿ ಜಿ.ಟಿ ದೇವೇಗೌಡ ಮತ್ತು ಅವರ ಪುತ್ರ 20 ದಿನ ಜೈಲಲ್ಲಿ ಕಳೆಯಬೇಕಾಗಿತ್ತು ಹೇಳಿದರು.