ವೀರಭದ್ರ ದೇವರು ಪಿತೃವಾಕ್ಯ ಪರಿಪಾಲನೆಯ ಸಂಕೇತ: ಚನ್ನವೀರ ಸ್ವಾಮೀಜಿ

0
Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ವೀರಭದ್ರ ದೇವರು ದುಷ್ಟರ ಶಿಕ್ಷಕ, ಶಿಷ್ಟರ ರಕ್ಷಕನಾಗಿದ್ದಾನೆ. ಪಿತೃವಾಕ್ಯ ಪರಿಪಾಲಿಸುವುದಕ್ಕಾಗಿ ದಕ್ಷಬ್ರಹ್ಮನ ಶಿರವನ್ನು ಹಾರಿಸಿದ. ಅದಕ್ಕಾಗಿಯೇ ವೀರಭದ್ರ ದೇವರು ಪಿತೃವಾಕ್ಯ ಪರಿಪಾಲನೆಯ ಸಂಕೇತವಾಗಿದ್ದಾನೆ. ಅದರಂತೆಯೇ ಪ್ರತಿಯೊಬ್ಬರೂ ತಂದೆ-ತಾಯಿಗೆ ವಿಧೇಯರಾಗಿ ವೀರಭದ್ರ ದೇವರ ಆದರ್ಶವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೂವಿನಶಿಗ್ಲಿ ವಿರಕ್ತಮಠದ ಚನ್ನವೀರ ಸ್ವಾಮೀಜಿ ಹೇಳಿದರು.

Advertisement

ಅವರು ಮಂಗಳವಾರ ರಾತ್ರಿ ಶಿರಹಟ್ಟಿ ಪೇಟೆಯ 42ನೇ ವರ್ಷದ ಶ್ರೀ ವೀರಭದ್ರೇಶ್ವರ ಕಾರ್ತಿಕೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಆದಿ-ಅನಾದಿ ಕಾಲದಿಂದೂ ಸಹ ದೀಪಕ್ಕೆ ತನ್ನದೇ ಆದ ವೈಶಿಷ್ಟ್ಯತೆ ಇದ್ದು, ತ್ರಿಮೂರ್ತಿಗಳು ಸಹ ಜ್ಯೋತಿ ರೂಪವಾಗಿದ್ದಾರೆ. ಕತ್ತಲಿನಿಂದ ಬೆಳಕಿನ ಕಡೆಗೆ ಕೊಂಡೊಯ್ಯುವುದೇ ಕಾರ್ತಿಕೋತ್ಸವದ ಉದ್ದೇಶವಾಗಿದೆ. ಪ್ರಸ್ತುತ ದಿನಮಾನದಲ್ಲಿ ವಿಜ್ಞಾನ ನೆಮ್ಮದಿ ಹಾಳು ಮಾಡುತ್ತಿದೆ. ವಿಜ್ಞಾನ ನಾಡಿಗೆ ಸಮೃದ್ಧಿ ಕೊಡುತ್ತದೆ, ವಿಜ್ಞಾನವು ಬೇಕು, ಜೊತೆಗೆ ಮನುಷ್ಯ ಮೃಗನಂತೆ ವರ್ತನೆ ಮಾಡುವುದನ್ನು ಬಿಟ್ಟು ಜೀವನವನ್ನು ಸಾರ್ಥಕಗೊಳಿಸಿಕೊಳ್ಳಲು ಆಧ್ಯಾತ್ಮ ಜೀವನದತ್ತ ಸಾಗುವುದು ಅವಶ್ಯವಿದೆ. ಕಾರ್ತಿಕ ಮಾಸದಲ್ಲಿ ದೇವರನ್ನು ಸಂಪ್ರೀತಗೊಳಿಸುವುದಕ್ಕಾಗಿ ದೀಪಾರಾಧನೆ ಮಾಡಬೇಕು. ಸಮಾಜಕ್ಕೆ, ನಾಡಿಗೆ, ಗ್ರಾಮಕ್ಕೆ ಬೆಳಗುವ ಜ್ಯೋತಿ ನೀವಾಗಬೇಕೆಂದು ಹೇಳಿದರು.

ನಂತರ ಅಡವಿಸೋಮಾಪೂರದ ಶ್ರೀ ಸಿದ್ದಲಿಂಗೇಶ್ವರ ಜಾನಪದ ಕಲಾತಂಡದ ವತಿಯಿಂದ ಅಹೋರಾತ್ರಿ ಜಾನಪದ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಂದ್ರಕಾAತ ನೂರಶೆಟ್ಟರ, ಎಸ್.ಬಿ. ಹೊಸೂರ, ಮುತ್ತಣ್ಣ ಮಜ್ಜಗಿ, ಸಿದ್ದು ಹೊಸೂರ, ಸುರೇಶ ಹವಳದ, ಶಿವು ಪಟ್ಟಣಶೆಟ್ಟರ, ಬಸವರಾಜ ರಾಜಮನಿ, ಬಸವರಾಜ ಭೋರಶೆಟ್ಟರ, ಮಂಜು ರಿತ್ತಿ ಮುಂತಾದವರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here