ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರವಾಹಿಯ ಚಿನ್ನುಮರಿ ಖ್ಯಾತಿಯ ಚಂದನಾ ಅನಂತಕೃಷ್ಣ ಮದುವೆ ಸಂಭ್ರದಲ್ಲಿದ್ದಾರೆ. ಇಂದು ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ ನಲ್ಲಿ ಅದ್ದೂರಿಯಾಗಿ ವಿವಾಹ ನಡೆಯಲಿದ್ದು ಮದುವೆಗೆ ಉದ್ಯಮಿಗಳು, ಸಿನಿಮಾ ರಂಗದವರು ,ಕಿರುತೆರೆ ಕಲಾವಿದರು ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ.
ಸದ್ಯ ಮೆಹೆಂದಿ ಶಾಸ್ತ್ರ, ಸಂಗೀತ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿದ್ದು, ಕ್ಯೂಟ್ ಜೋಡಿ ಬಾರೇ ಬಾರೇ ಕಲ್ಯಾಣ ಮಂಟಪಕ್ಕೆ ಬಾ ಅಂತ ಹೆಜ್ಜೆ ಹಾಕಿ ಸಂಭ್ರಮಿಸಿದೆ. ಚಂದನಾ ಖುಷಿಯಲ್ಲಿ ಲಕ್ಷ್ಮೀ ನಿವಾಸ ತಂಡ ಕೂಡ ಜೊತೆಯಾಗಿದೆ.
ಚಂದನಾ ಅವರು ತಾವು ಮದುವೆಯಾಗುತ್ತಿರುವ ಹುಡುಗ ಪ್ರತ್ಯಕ್ಷ್ ಜತೆ ಸಖತ್ ಡ್ಯಾನ್ಸ್ ಮಾಡಿದ್ದಾರೆ. ಕುಟುಂಬಸ್ಥರು ನಿಶ್ಚಯಿಸಿರುವ ಮದುವೆ ಇದಾಗಿದ್ದು, ಬಂಧು – ಮಿತ್ರರು, ಕಿರುತೆರೆ ಕಲಾವಿದರ ಸಮ್ಮುಖದಲ್ಲಿ ಚಂದನಾ ಅನಂತಕೃಷ್ಣ – ಪ್ರತ್ಯಕ್ಷ್ ವಿವಾಹವಾಗಲಿದ್ದಾರೆ.
ಮೂಲತಃ ಚಿಕ್ಕಮಗಳೂರಿನವರಾಗಿರುವ ಪ್ರತ್ಯಕ್ಷ ಬೆಂಗಳೂರಿನಲ್ಲೇ ಸ್ವಂತ ಉದ್ಯಮ ಹೊಂದಿದ್ದಾರೆ. ಸಿನಿಮಾ ಕುಟುಂಬದ ಹಿನ್ನಲೆ ಹೊಂದಿರೋ ಪ್ರತ್ಯಕ್ಷ ತಂದೆ ನಟ ದಿವಂಗತ ಉದಯ್ ಹುತ್ತಿನಗದ್ದೆ ಹಾಗೂ ತಾಯಿ ಲಲಿತಾಂಜಲಿ ಉದಯ್ ದಂಪತಿ ಪುತ್ರ. ಪ್ರತ್ಯಕ್ಷ್ ತಂದೆ ಉದಯ್ ಡಾ.ರಾಜ್ ಕುಮಾರ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.