ಬೆಳಗಾವಿ:- ನಗರದ ನಂದಿನಿ ಡೈರಿ ಬಳಿ ನಡೆದ ಗುಂಡಿನ ದಾಳಿಯಲ್ಲಿ ಓರ್ವ ಯುವಕ ಗಂಭೀರ ಗಾಯಗೊಂಡ ಘಟನೆ ಜರುಗಿದೆ.
Advertisement
ಬೆಳಗಾವಿ ನಗರದ ಮಹಾಂತೇಶ ನಗರ ಬಳಿಯ ನಂದಿನ ಡೈರಿಯ ಬಳಿ ಶೂಟೌಟ್ ನಡೆದಿದ್ದು, ತಿಳಕವಾಡಿಯ ನಿವಾಸಿ 31 ವರ್ಷದ ಪ್ರಣೀತ್ ಕುಮಾರ್ ಎಂಬ ಯುವಕನ ಮೇಲೆ ಗುಂಡಿನ ದಾಳಿ ನಡೆದಿದೆ.
ಕೆಎಂಎಫ್ ಡೈರಿ ಬಳಿ ಟಿಳಕವಾಡಿಯ ದ್ವಾರಕಾ ನಗರ ಐದನೇ ಕ್ರಾಸ್ನ ನಿವಾಸಿ ಪ್ರಣೀತ್ ಕುಮಾರ್ ಮೇಲೆ ವೈಯಕ್ತಿಕ ದ್ವೇಷ ಹಿನ್ನೆಲೆ ದಾಳಿ ನಡೆದಿರುವ ಶಂಕೆ ಇದೆ ಎನ್ನಲಾಗಿದೆ.
ಸ್ಥಳಕ್ಕೆ ಮಾಳಮಾರುತಿ ಠಾಣೆ ಎಸಿಪಿ, ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.