ಯೋಗಿರಾಜರ ಆರಾಧನಾ ಮಹೋತ್ಸವ ಇಂದಿನಿAದ
ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಲಕ್ಕುಂಡಿಯ ಪವಾಡ ಪುರುಷ, ಇಚ್ಛಾಮರಣಿ ಯೋಗಿರಾಜ ಮಹಾರಾಜರ 103ನೇ ಆರಾಧನಾ ಮಹೋತ್ಸವವು ನ.29ರಿಂದ ಮೂರು ದಿನಗಳ ಕಾಲ ಧಾರ್ಮಿಕ ವಿಧಿ ವಿದಾನಗಳೊಂದಿಗೆ ಜರುಗುವುದು.
ಕಾರ್ಯಕ್ರಮವನ್ನು ಯೋಗಿರಾಜ ಭಕ್ತಿ ಮಂಡಳಿಯ ಆಶ್ರಯದಲ್ಲಿ ಶಂಕರ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ. ನ.29ರಂದು ಬೆಳಿಗ್ಗೆ 5.30ರಿಂದ ಸಂಜೆ 9 ಗಂಟೆಯವರೆಗೆ ಜರುಗುವ ಧಾರ್ಮಿಕ ಕಾರ್ಯಗಳಲ್ಲಿ ಸದ್ಗುರುಗಳ ಪಾದುಕೆ ಸ್ಥಾಪನೆ, ವಿದ್ಯಾಶಂಕರ ದೇವರಿಗೆ ಲಘು ರುದ್ರಾಭಿಷೇಕ, ಗಣಪತಿ ಸಹಸ್ರ ಮೋದಕ ಹೋಮ, ಮಹಾ ಮಂಗಳಾರತಿ, ಮಹಾ ಪ್ರಸಾದ, ದೀಪೋತ್ಸವ, ಶೇಜಾರತಿ ಮಂತ್ರಪುಷ್ಪ ಹಾಗೂ ಅಷ್ಟಾವಧಾನ ಸೇವೆ ನಡೆಯುವುದು.
ಮುಂಜಾನೆ 10.30ರಿಂದ ಸಂಜೆ 7.30ರವರೆಗೆ ವೇದಿಕೆ ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ವಿಭಾವರಿ ಭಜನಾ ಮಂಡಳಿಯಿAದ ಭಜನೆ, ಸೋತ್ರ ಪಠಣ, ಬೆಂಗಳೂರು ಗೌರಿ ಅರುಣ ಕುಲಕರ್ಣಿ ಅವರಿಂದ ಭಕ್ತಿ ಸಂಗೀತ, ಧಾರವಾಡ ತಾರಕೇಶ್ವರ ಭಜನಾ ಮಂಡಳಿಯಿAದ ಭಕ್ತಿ ಭಜನೆ, ಗುರುವಿನಹಳ್ಳಿಯ ವಿಶ್ವನಾಥರಾವ್ ಕುಲಕರ್ಣಿ ಅವರಿಂದ ಗಮಕ ವಾಚನ, ಕುರ್ತುಕೋಟಿಯ ಕೀರ್ತನ ಕೇಸರಿ ದಿಗಂಬರಶಾಸ್ತ್ರಿ ಅವರಿಂದ ಕೀರ್ತನೆ ನಡೆಯಲಿದೆ.
ನ.30ರಂದು ಬೆಳಿಗ್ಗೆ ಕಾಕಡಾರತಿ, ಮಧ್ಯಾಹ್ನ 12ಕ್ಕೆ ಅಲಂಕಾರ ಪೂಜೆ, ಮುಂಜಾನೆ 9ರಿಂದ ಸಂಜೆ 9ರವರೆಗೆ ವೇದಿಕೆ ಕಾರ್ಯಕ್ರಮಗಳು, ಗದಗ ಕರಿ ಭಜನಾ ಮಂಡಳ, ಹುಬ್ಬಳ್ಳಿ ಶಾರಾದಾ ಮಹಿಳಾ ಕುಂಜ ಹಾಗೂ ಹಳೆ ಹುಬ್ಬಳ್ಳಿಯ ಶಂಕರ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ, ಹುಬ್ಬಳ್ಳಿಯ ಅರ್ಪಿತಾ ಜಹಗೀರದಾರ ಹಾಗೂ ಶ್ರೀಕಾಂತ ಹೂಲಿ ಸಂಗಡಿಗರಿಂದ ಭಕ್ತಿ ಸಂಗೀತ ನಡೆಯುವುದು.
ಡಿ.1ರಂದು ಬೆಳಿಗ್ಗೆ 5.30ರಿಂದ ಮದ್ಯಾಹ್ನ 1.30ರವರೆಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ನಂತರ ಸತ್ಯನಾರಾಯಣ ಪೂಜಾ ನೆರವೇರುವುದು. ಗದಗ ಮಹಾಲಕ್ಷ್ಮೀ ಭಜನಾ ಮಂಡಳಿಯಿಂದ ಭಾಗ್ಯಶ್ರೀ ಘಳಗಿ ಅವರು ರಚಿಸಿದ ದಾಸಶ್ರೇಷ್ಠ ಪರಂದರ ದಾಸರು ನಾಟಕ ಪ್ರದರ್ಶನ, ನಂತರ ಕೋಲಾಟ, ಭಜನೆ, ಮಧ್ಯಾಹ್ನ ನರೆಗಲ್ಲದ ವೆಂಕಟೇಶ ಕುಲಕರ್ಣಿ ಅವರಿಂದ ಭಕ್ತಿ ಸಂಗೀತ, ಧಾರವಾಡದ ಉಮೇಶ ಪಾಟೀಲ, ಮೋಹನ ಮಾಗಡಗೇರಿ ಅವರಿಂದ ಸಂಗೀತ ಸೇವೆ ನಡೆಯುವುದು ಎಂದು ಭಕ್ತ ಮಂಡಳಿಯ ಪ್ರಕಟಣೆ ತಿಳಿಸಿದೆ.



