ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ಚಿಕ್ಕಹಂದಿಗೋಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಎಸ್.ಡಿ.ಎಮ್.ಸಿಯನ್ನು ರಚನೆ ಮಾಡಲಾಯಿತು.
2024-2027ರ ಅವಧಿಗೆ ನೂತನ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮೀತಿಯ ಅಧ್ಯಕ್ಷರಾಗಿ ಪಾರ್ವತಿ ಶರಣಯ್ಯ ಕಾಶಿಮಠ ಮತ್ತು ಉಪಾಧ್ಯಕ್ಷರಾಗಿ, ಸದಸ್ಯರಾಗಿ ಕನಕಪ್ಪ ಪೂಜಾರ, ಮಂಜುಳಾ ಮಾದರ, ಪಕ್ಕೀರಪ್ಪ ಬೋರ್ಜಿ, ಅಲ್ಲಾಭಕ್ಷಿ ದುಂದೂರ, ರಮಜಾನಸಾಬ ಶಲವಡಿ, ಮಮತಾಜ ನದಾಫ, ರುಕ್ಸಾನಬಾನು ಶಲವಡಿ, ಸಂತೋಷ ಕುಂಬಾರ, ಪ್ರವೀಣ ಪೂಜಾರ, ವೀರನಗೌಡ ಗೌಡರ, ಗಿರಿಜಾ ವಿರಕ್ತಮಠ, ವಿಜಯಲಕ್ಷ್ಮಿ ಗುಡ್ಡಿಮಠ, ಶ್ರೀದೇವಿ ವಿರಕ್ತಮಠ, ರೇವತಿ ಪತ್ತಾರ, ಪ್ರಭಾವತಿ ಆಲೂರ ಇವರನ್ನು ಆಯ್ಕೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಹಿಂದಿನ ಎಸ್.ಡಿ.ಎಮ್.ಸಿ ಸದಸ್ಯರಿಗೆ ಬೀಳ್ಕೊಡಲಾಯಿತು. ಶಾಲೆಯ ಮುಖ್ಯೋಪಾಧ್ಯಾಯೆ ಪದ್ಮಾವತಿ ಹುಚ್ಚಣ್ಣವರ ಸೇರಿದಂತೆ ಶಾಲಾ ಶಿಕ್ಷಕರು, ವಿಧ್ಯಾರ್ಥಿಗಳು ಹಾಗೂ ಗ್ರಾಮದ ಗುರುಹಿರಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.