ಅಗಡಿ ಕಾಲೇಜಿನಲ್ಲಿ 10ನೇ ವರ್ಷದ ಕನ್ನಡ ಹಬ್ಬ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ:  ಪಟ್ಟಣದ ಶ್ರೀಮತಿ ಕಮಲಾ ಮತ್ತು ಶ್ರೀ ವೆಂಕಪ್ಪ ಎಂ.ಅಗಡಿ ಇಂಜಿನಿಯರಿಂಗ್ ಮಹಾವಿದ್ಯಾಲಯ ಹಾಗೂ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ 10ನೇ ವರ್ಷದ `ಅಗಡಿ ಕನ್ನಡ ಹಬ್ಬ ಸಂಭ್ರಮ’ ಕಾರ್ಯಕ್ರಮದಲ್ಲಿ ಗುರುವಾರ ವಿದ್ಯಾರ್ಥಿಗಳಿಂದ ಸಮೂಹ ನೃತ್ಯ ಸಂಭ್ರಮ ನೆರವೇರಿತು.

Advertisement

ಕಸಾಪ ತಾಲೂಕಾಧ್ಯಕ್ಷ ಈಶ್ವರ ಮೆಡ್ಲೇರಿ, ಶಿರಹಟ್ಟಿ ರಾಣಿ ಚನ್ನಮ್ಮ ವಸತಿ ಶಾಲೆಯ ಪ್ರಾಚಾರ್ಯ ನಾಗರಾಜ ಕಳಸಾಪುರ ನೃತ್ಯ ಸಂಭ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕಾಲೇಜಿನ ಆವರಣದಲ್ಲಿ ಕನ್ನಡ ಜನಪದ ಸಂಪ್ರದಾಯದ ಉಡುಗೆ ತೊಟ್ಟ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಸಂಭ್ರಮ ಮನೆ ಮಾಡಿತ್ತು. ಇಂಜಿನಿಯರಿAಗ್ ಹಾಗೂ ಪದವಿಪೂರ್ವ ಕಾಲೇಜಿನ 80ವಿದ್ಯಾರ್ಥಿಗಳ ತಂಡ 30 ನಿಮಿಷಗಳ ಕಾಲ ಕನ್ನಡ ಹಾಡಿಗೆ ನೃತ್ಯ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು.

ಈ ಸಂದರ್ಭದಲ್ಲಿ ಅಗಡಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಪರಶುರಾಮ ಬಾರ್ಕಿ, ಪ.ಪೂ ಕಾಲೇಜಿನ ಪ್ರಾಚಾರ್ಯ ಡಾ. ಎನ್.ಹಯವದನ, ಮುಖ್ಯ ಆಡಳಿತ ಅಧಿಕಾರಿ ಪ್ರೊ.ವಿಕ್ರಮ ಶಿರೋಳ, ಕಾರ್ಯಕ್ರಮ ಸಂಯೋಜಕ ಪ್ರೊ. ಸೋಮಶೇಖರ ಕೆರಿಮನಿ, ಸಮೂಹ ನೃತ್ಯ ಉಸ್ತುವಾರಿ ಪ್ರೊ. ಬಸವರಾಜ ಸೊರಟೂರ, ಪ್ರೊ. ರಾಜೇಶ್ವರಿ ಗಾಮನಗಟ್ಟಿ, ಡಾ. ಆರ್.ಎಮ್. ಪಾಟೀಲ್, ರವಿಪ್ರಕಾಶ ಸೇರಿ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳಿದ್ದರು.


Spread the love

LEAVE A REPLY

Please enter your comment!
Please enter your name here