ಮಹಿಳಾ ಹೋರಾಟಗಾರ್ತಿಗೆ ಲವ್ ಸೆಕ್ಸ್ ದೋಖಾ: ನ್ಯಾಯಕ್ಕಾಗಿ ಯೋಧನ ಮನೆ ಮುಂದೆ ಧರಣಿ

0
Spread the love

ಬೆಳಗಾವಿ: ಮದುವೆ ಆಗುವುದಾಗಿ ನಂಬಿಸಿ ಯೋಧನೊಬ್ಬ ಬೆಳಗಾವಿಯ ಮಚ್ಚೆ ಗ್ರಾಮದ ನಿವಾಸಿ ಹೋರಾಟಗಾರ್ತಿಗೆ ಲವ್ ಸೆಕ್ಸ್, ದೋಖಾ ಮಾಡಿರುವ ಆರೋಪ ಕೇಳಿಬಂದಿದೆ. ಪ್ರಮೋದಾ ಹಜಾರೆ ಮೋಸ ಹೋದ ಮಹಿಳೆಯಾಗಿದ್ದು, ಬಿಜಗರ್ಣಿ ಗ್ರಾಮದ ಯೋಧ ಅಕ್ಷಯ್ ನಲವಡೆಯಿಂದ ವಂಚನೆ ಆರೋಪ ಕೇಳಿಬಂದಿದೆ. ಸದ್ಯ ನ್ಯಾಯಕ್ಕಾಗಿ ಯೋಧನ ಮನೆ ಮುಂದೆ ಹೋರಾಟಗಾರ್ತಿ ಧರಣಿ ಮಾಡಿದ್ದಾರೆ.

Advertisement

ಆರು ವರ್ಷದ ಹಿಂದೆ ಫೇಸ್ಬುಕ್​ನಲ್ಲಿ ಅಕ್ಷಯ್ ನಲವಡೆ ಪರಿಚಯವಾಗಿದ್ದ. ತನಗಿಂತ ಹದಿನಾಲ್ಕು ವರ್ಷ ಮೇಲ್ಪಟ್ಟ ಮಹಿಳೆ ಜೊತೆಗೆ ಪ್ರೀತಿ ಮಾಡಿದ್ದ. ಮದುವೆ ಆಗುವುದಾಗಿ ಹೋರಾಟಗಾರ್ತಿಗೆ ನಂಬಿಸಿದ್ದ. ಆರು ವರ್ಷದ ಹಿಂದೆ ಮನೆಯ ದೇವರ ಕೋಣೆ ಮುಂದೆ ಪ್ರಮೋದಾ ಮತ್ತು ಅಕ್ಷಯ್ ಮದುವೆಯಾಗಿದ್ದರು. ಬಳಿಕ ಆತ ಸೇನೆಯಿಂದ ರಜೆಗೆ ಬಂದಾಗ ಹದಿನೈದು ದಿನಗಳ ಕಾಲ ಪ್ರಮೋದಾ ಬಳಿ ಉಳಿದುಕೊಳ್ಳುತ್ತಿದ್ದ.

ಇದೇ ವೇಳೆ ಅಕ್ಷಯ್​ಗೆ ಒಂಬತ್ತು ಯುವತಿಯರ ಜೊತೆಗೆ ನಂಟಿರುವುದು ಬೆಳಕಿಗೆ ಬಂದಿದೆ. ಅದನ್ನು ಪ್ರಶ್ನೆ ಮಾಡಿದ ಬಳಕ ಎಲ್ಲರನ್ನೂ ಬಿಟ್ಟು ಜೊತೆಗೆ ಇರುವುದಾಗಿ ಅಕ್ಷಯ್ ಹೇಳಿದ್ದ. ಮೊನ್ನೆ ಅಕ್ಷಯ್ ರಜೆಗೆ ಬಂದಾಗ ಬೇರೊಬ್ಬ ಯುವತಿ ಜೊತೆಗೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದ. ಈ ವಿಚಾರ ಗೊತ್ತಾಗಿ ಪ್ರಮೋದಾ ಅಕ್ಷಯ್ ಮನೆಗೆ ಹೋಗಿದ್ದರು.

ಹಿರಿಯರು, ಕುಟುಂಬಸ್ಥರು ಕೂಡಿಕೊಂಡು ಸರಿಪಡಿಸುವುದಾಗಿ ಹೇಳಿ ಕಳಿಸಿದ್ದರು. ಬಳಿಕ ಮದುವೆ ಆಗಲ್ಲ ಎಂದು ಅಕ್ಷಯ್ ಉಲ್ಟಾ ಹೊಡೆದಿದ್ದ. ಇದೀಗ ಅಕ್ಷಯ್ ಇಂದು ಮದುವೆ ಆಗಿದ್ದಾನೆ ಅಂತಾ ಆತನ ಮನೆಗೆ ಪ್ರಮೋದಾ ಬಂದಿದ್ದಾರೆ. ಆದರೆ ಅಕ್ಷಯ್ ಕುಟುಂಬಸ್ಥರು ಮನೆಗೆ ಬೀಗ ಹಾಕಿಕೊಂಡು ಹೋಗಿದ್ದಾರೆ. ಸಾಯುವವರೆಗೂ ಮ‌ನೆ ಮುಂದೆ ಕುಳಿತುಕೊಳ್ಳುತ್ತೇನೆ ಎಂದು ಕಣ್ಣೀರಿಟ್ಟಿದ್ದಾರೆ.


Spread the love

LEAVE A REPLY

Please enter your comment!
Please enter your name here