ನ.30ರಂದು ಸುಸಜ್ಜಿತ ಫುಟ್ಬಾಲ್ ಕ್ರೀಡಾಂಗಣ ಉದ್ಘಾಟನೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಪ್ರೈಮ್ ಸ್ಪೋರ್ಟ್ಸ್ ಪಾರ್ಕ್ ವತಿಯಿಂದ ನಗರದ ಕಳಸಾಪುರ ರಿಂಗ್ ರೋಡ್ ಹತ್ತಿರ ಟರ್ಫ್ ಕ್ರಿಕೆಟ್ ಮತ್ತು ಫುಟ್ಬಾಲ್ ಕ್ರೀಡಾಂಗಣ ನ. 30ರಂದು ಸಂಜೆ 5.30ಕ್ಕೆ ಉದ್ಘಾಟನೆಗೊಳ್ಳಲಿದೆ ಎಂದು ಎಸ್.ಎಚ್. ಶಿವನಗೌಡ್ರ ಹೇಳಿದರು.

Advertisement

ಶುಕ್ರವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಾಜಿ ಸಿಎಂ ಹಾಗೂ ಹಾವೇರಿ-ಗದಗ ಸಂಸದ ಬಸವರಾಜ ಬೊಮ್ಮಾಯಿ ಅವರು ಕ್ರೀಡಾಂಗಣವನ್ನು ಉದ್ಘಾಟಿಸಲಿದ್ದಾರೆ. ಕಾನೂನು ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ. ಪಾಟೀಲ, ಮಾಜಿ ಸಚಿವ ಬಿ. ಶ್ರೀರಾಮುಲು, ಶಾಸಕ ಸಿ.ಸಿ. ಪಾಟೀಲ ಸೇರಿದಂತೆ ಜಿಲ್ಲೆಯ ಇನ್ನಿತರ ಜನಪ್ರತಿನಿಧಿಗಳು ಮತ್ತು ಖ್ಯಾತ ಕ್ರಿಕೆಟಿಗ ಅನಿರುದ್ಧ ಜೋಶಿ ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಕೇರಳದ ಸುರೇಖಾ ಸಂಸ್ಥೆ ಈ ಟರ್ಫ್ ಕ್ರೀಡಾಂಗಣವನ್ನು ನಿರ್ಮಿಸಿದೆ. ದೇಶಾದ್ಯಂತ ಸುಮಾರು ೧ ಸಾವಿರ ಕ್ರೀಡಾಂಗಣವನ್ನು ನಿರ್ಮಿಸಿದ ಅನುಭವಿ ಸಂಸ್ಥೆ ಇದಾಗಿದ್ದು, ಗದುಗಿನಲ್ಲಿಯೂ ಅಂತಾರಾಷ್ಟಿçÃಯ ಗುಣಮಟ್ಟದ ಟರ್ಫ್ ಅಂಕಣವನ್ನು ನಿರ್ಮಿಸಿದೆ. ಒಟ್ಟು 11 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿರುವ ಈ ಕ್ರೀಡಾಂಗಣದಲ್ಲಿ ಕ್ರಿಕೆಟ್, ಫುಟ್ಬಾಲ್, ವಾಲಿಬಾಲ್ ಇನ್ನಿತರ ಕ್ರೀಡೆಗಳನ್ನು ಹಗಲು ಮತ್ತು ರಾತ್ರಿ ಹೊತ್ತಿನಲ್ಲೂ ಆಡಲು ಅನುಕೂಲ ಆಗುವಂತೆ ರೂಪಿಸಲಾಗಿದೆ. ಅಲ್ಲದೇ ಕ್ರೀಡಾಂಗಣದಲ್ಲಿ ಡ್ರೆಸ್ಸಿಂಗ್ ರೂಂ, ಸಿ.ಸಿ ಟಿವಿ ಹಾಗೂ ಇನ್ನಿತರ ಅನೇಕ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ನಾರಾಯಣ ಕುಡತಕರ, ರಾಘವೇಂದ್ರ ಬಾರಡ, ಸಂತೋಷ ಚನ್ನಪ್ಪನವರ, ವರ್ಧಮಾನ್ ಜೈನ್, ಗೌತಮ್ ಜೈನ್, ಸಾಗರ ಶಿವನಗೌಡರ ಮುಂತಾದವರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here