ಮೈಸೂರು: ಸ್ವಾಭಿಮಾನ ಸಮಾವೇಶಕ್ಕೆ ಯಾವುದೇ ಕಾರ್ಯಕರ್ತನ ವಿರೋಧವಿಲ್ಲ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಹಾಸನಲ್ಲಿ ಡಿಸೆಂಬರ್ 5 ರಂದು ನಡೆಯಲಿರುವ ಸ್ವಾಭಿಮಾನ ಸಮಾವೇಶಕ್ಕೆ ಯಾವುದೇ ಕಾರ್ಯಕರ್ತನ ವಿರೋಧವಿಲ್ಲ,
Advertisement
ಕಾಂಗ್ರೆಸ್ ವತಿಯಿಂದಲೇ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದ್ದು ಶೋಷಿತ ಸಮುದಾಯಗಳ ಒಕ್ಕೂಟ ಕೈಜೋಡಿಸಿದೆ ಎಂದು ಹೇಳಿದರು.
ಇನ್ನೂ ಹಾಸನಲ್ಲಿ ಡಿಸೆಂಬರ್ 5 ರಂದು ನಡೆಯಲಿರುವ ಸ್ವಾಭಿಮಾನ ಸಮಾವೇಶಕ್ಕೆ ಡಿಕೆ ಶಿವಕಮಾರ್ ಬಣದ ವಿರೋಧವಿದೆ ಅಂತ ಹೇಳುಲಾಗುತ್ತಿದೆ, ಅದರೆ ಕೆಪಿಸಿಸಿ ಅಧ್ಯಕ್ಷರೇ ಸಮಾವೇಶದಲ್ಲಿ ಭಾಷಣ ಮಾಡಲಿದ್ದಾರೆ, ಇದು ಯಾವ ಕಾರಣಕ್ಕೂ ಸಿದ್ದರಾಮಯ್ಯ ಅವರ ವೈಯಕ್ತಿಕ ಕಾರ್ಯಕ್ರಮವಲ್ಲ ಎಂದು ಹೇಳಿದರು.


