CCB ಪೊಲೀಸರ ಕಾರ್ಯಾಚರಣೆ: ಅಕ್ರಮವಾಗಿ ಹೆರಾಯಿನ್ ಮಾರಾಟ ಮಾಡುತ್ತಿದ್ದ ಆರೋಪಿ ಅರೆಸ್ಟ್

0
Spread the love

ಬೆಳಗಾವಿ: ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಹೆರಾಯಿನ್ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಅರೆಸ್ಟ್‌ ಮಾಡಿದ್ದಾರೆ. ಬೆಳಗಾವಿ ನಗರದ ಬಸವನಗಲ್ಲಿಯ ಬಾಗೇಶ ನಂದಾಳಕರ ಬಂಧಿತ ಆರೋಪಿಯಾಗಿದ್ದು, ಬೆಳಗಾವಿ ಅಶೋಕ ನಗರದ ಹೂವಿನ ಮಾರ್ಕೆಟ್ ಬಳಿ ಅನಧಿಕೃತವಾಗಿ ಹೆರಾಯಿನ್ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದನು.

Advertisement

ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪಿಐ ನಂದಿಶ್ವರ್ ಕುಂಬಾರ್ ನೇತೃತ್ವದಲ್ಲಿ ದಾಳಿ ಮಾಡಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನದಿಂದ 1.06 ಲಕ್ಷ ರೂಪಾಯಿ ಮೌಲ್ಯದ 36.16ಗ್ರಾಂ ಹೆರಾಯಿನ್ ಜಪ್ತಿ ಮಾಡಿದ್ದು, ಘಟನೆ ಸಂಬಂಧ ಪ್ರಕರಣ ದಾಖಲು ಮಾಡಿದ್ದಾರೆ.


Spread the love

LEAVE A REPLY

Please enter your comment!
Please enter your name here