ಹುಬ್ಬಳ್ಳಿ: ಸಿದ್ದರಾಮಯ್ಯರನ್ನ ಕೆಳಗಿಳಿಸೋ ಶಕ್ತಿ CLP ಹಾಗೂ AICCಗೆ ಮಾತ್ರ ಇದೆ ಎಂದು ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸಂಪುಟ ಪುನರ್ ರಚನೆ ಮಾಹಿತಿ ಇಲ್ಲ. ಸಚಿವರ ಮೌಲ್ಯಮಾಪನ ನಡೆಯಬೇಕು ಎಂದ ತಿಮ್ಮಾಪುರ,
Advertisement
ಸಿದ್ದರಾಮಯ್ಯರನ್ನ ಕೆಳಗಿಳಿಸೋ ಶಕ್ತಿ ಸಿಎಲ್‌ಪಿ ಹಾಗೂ ಎಐಸಿಸಿಗೆ ಮಾತ್ರ ಇದೆ. ಸಿಎಲ್ಪಿಯಿಂದ ಸಿದ್ದರಾಮಯ್ಯ ಆಯ್ಕೆಯಾಗಿದ್ದಾರೆ. ಅಲ್ಲಿಂದ ಯಾವ ಮಾಹಿತಿ ಬಂದಿಲ್ಲ ಎಂದು ಹೇಳಿದರು. ಇನ್ನೂ ಹಾಸನದಲ್ಲಿ ನಡೆಸಲು ಇಚ್ಛಿಸಿರುವ ಸ್ವಾಭಿಮಾನ ಸಮಾವೇಶದ ಬಗ್ಗೆ ಪ್ರತಿಕ್ರಿಯಿಸಿ, ಮಾಡಿದ್ರೆ ತಪ್ಪೇನು? ಕೆಲವರು ಅವರ ಅಭಿಪ್ರಾಯ ಹೇಳಿದ್ದಾರೆ. ಮಾಡಿದ್ರೆ ತಪ್ಪಿಲ್ಲ ಎಂದರು.