ಡಿ.1ರಂದು ಕಾರ್ತಿಕ ಕೊನೆಯ ದೀಪೋತ್ಸವ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಪಟ್ಟಣದ ಐತಿಹಾಸಿಕ ಪ್ರಸಿದ್ಧ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಡಿ.1ರಂದು ಛಟ್ಟಿ ಅಮವಾಸ್ಯೆ ದಿನ ಸಂಜೆ 7 ಗಂಟೆಗೆ ಕಾರ್ತಿಕ ಮಾಸದ ಕೊನೆಯ ದೀಪೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಅರ್ಚಕ ರಾಘವೇಂದ್ರ ಪೂಜಾರ ತಿಳಿಸಿದ್ದಾರೆ.

Advertisement

ಸಂಜೆ 7 ಗಂಟೆಗೆ ಆರಂಭವಾಗುವ ದೀಪೋತ್ಸವ ಕಾರ್ಯಕ್ರಮವು ಓಂ ನಮಃ ಶಿವಾಯ ಬೀಜಾಕ್ಷರ ಮಂತ್ರದೊಂದಿಗೆ ಜರುಲಿದ್ದು, ಮಧ್ಯಾಹ್ನ ಪ್ರಸಾದ ವ್ಯವಸ್ಥೆ, ಸಂಜೆ ದೀಪೋತ್ಸವದ ನಂತರ ಉಪಹಾರ ವ್ಯವಸ್ಥೆ ಜರುಗಲಿದ್ದು, ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಅವರು ಮನವಿ ಮಾಡಿದ್ದಾರೆ.


Spread the love

LEAVE A REPLY

Please enter your comment!
Please enter your name here