ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಸರಳ ವಿವಾಹವನ್ನು ಪ್ರೋತ್ಸಾಹಿಸುವದು ಅವಶ್ಯವಿದೆ: ಫಕ್ಕೀರೇಶ್ವರ ಶಾಸ್ತ್ರಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಆಧುನಿಕತೆಯ ಇಂದಿನ ದಿನಗಳಲ್ಲಿ ಮದುವೆಗಳು ವೈಭವೀಕರಣ, ದುಂದುವೆಚ್ಚ, ಪ್ರತಿಷ್ಠೆಯ ಮದುವೆಗಳಾಗಿ ಪರಿವರ್ತನೆಗೊಳ್ಳುತ್ತಿವೆ. ಕಾರಣ ನಾವಿಂದು ಸಾಮೂಹಿಕ ವಿವಾಹಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ. ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಸರಳ ವಿವಾಹವನ್ನು ಪ್ರೋತ್ಸಾಹಿಸುವದು ಅವಶ್ಯವಿದೆ ಎಂದು ಪುರಾಣ ಪ್ರವಚನಕಾರ ಬೆಳ್ಳಟ್ಟಿಯ ಫಕ್ಕೀರೇಶ್ವರ ಶಾಸ್ತ್ರಿಗಳು ಹಿರೇಮಠ ಹೇಳಿದರು.

Advertisement

ಅವರು ಗದುಗಿನ ಬಸವೇಶ್ವರ ನಗರದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀ ವೀರಭದ್ರ ದೇವಸ್ಥಾನ ಟ್ರಸ್ಟ್ ಕಮಿಟಿ, ಶ್ರೀ ಶಂಕರಲಿಂಗ ದೇವಸ್ಥಾನ ಟ್ರಸ್ಟ್ ಕಮಿಟಿ ಹಾಗೂ ದಾನೇಶ್ವರಿ ಮಹಿಳಾ ಮಂಡಳ, ಯುವಕ ಮಂಡಳದ ಸಂಯುಕ್ತ ಆಶ್ರಯದಲ್ಲಿ ಜರುಗುತ್ತಿರುವ ಶ್ರೀ ಶರಣೆ ದಾನಮ್ಮದೇವಿಯ 18ನೇ ವರ್ಷದ ಪುರಾಣ ಪ್ರವಚನ ಮಾಲಿಕೆಯಲ್ಲಿ ದಾನಮ್ಮದೇವಿ-ಸೋಮಲಿಂಗ ಅವರ ವಿವಾಹ ಸನ್ನಿವೇಶವನ್ನು ವಿಶ್ಲೇಷಿಸಿ ಮಾತನಾಡಿದರು.

ದಾನಮ್ಮದೇವಿಯ ವಿವಾಹವನ್ನು ಶಿವಭಕ್ತನಾದ ಶರಣ ಸೋಮಲಿಂಗೇಶ್ವರನೊAದಿಗೆ ಮಾಡಲು ಗುರು-ಹಿರಿಯರು ನಿಶ್ಚಯಿಸುತ್ತಾರೆ. ಆಗ ಬಡಜನರ ಮದುವೆಯ ಕಷ್ಟಗಳನ್ನು ಅರಿತಿದ್ದ ದಾನಮ್ಮ ತನ್ನಿಂದ ಬಡವರಿಗೆ ಸಹಾಯ ಆಗಲೆಂದು ನಿರ್ಧರಿಸಿ ನನ್ನೊಂದಿಗೆ 551 ಬಡ ಹೆಣ್ಣು ಮಕ್ಕಳ ಸಾಮೂಹಿಕ ವಿವಾಹ ನೆರವೇರಿಸಬೇಕೆಂದು ಕರಾರನ್ನು ತಂದೆಗೆ ಹಾಕುತ್ತಾಳೆ. ತಂದೆ ದಾನಮ್ಮಳ ಸಾಮಾಜಿಕ ಕಳಕಳಿ ಅರಿತು ಸಾಮೂಹಿಕ ವಿವಾಹ ಜರುಗಿಸಲು ಒಪ್ಪಿ ದಾನಮ್ಮ ತಾಯಿ ಸಾಮಾಜಿಕ ಕಳಕಳಿಯನ್ನು ಶ್ಲಾಘಿಸುವರು ಎಂದರು.

ಮೊಟ್ಟ ಮೊದಲ ಬಾರಿಗೆ ಕನ್ನಡ ನಾಡಿನಲ್ಲಿ ಸಾಮೂಹಿಕ ವಿವಾಹದ ಪರಿಕಲ್ಪನೆ ನೀಡಿದವರಲ್ಲಿ ದಾನಮ್ಮದೇವಿ ಮುಂಚೂಣಿಯಲ್ಲಿದ್ದಾಳೆ ಎಂದು ವಿವರಿಸಿದ ಶಾಸ್ತ್ರಿಗಳ ಪ್ರವಚನಕ್ಕೆ ಹಿರಿಯ ಸಂಗೀತ ಕಲಾವಿದ ವೀರೇಶ ಕಿತ್ತೂರ ಸಂಗೀತ ನೀಡಿದರು. ಶಾಮರಾವ ಪುಲಾರೆ ತಬಲಾ ಸಾಥ್ ನೀಡಿದರು.

ಪ್ರವಚನಕ್ಕೂ ಮುನ್ನ ಪುರಾಣದಲ್ಲಿ ಪ್ರಸ್ತಾಪಿತ ದಾನಮ್ಮ-ಸೋಮಲಿಂಗ ವಿವಾಹವು ವೀರಭದ್ರೇಶ್ವರ ದೇವಸ್ಥಾನದ ಪ್ರಾಂಗಣದಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಪಂಚಕಳಸದೊAದಿಗೆ ಅರ್ಚಕ ಗಂಗಾಧರ ಹಿರೇಮಠ, ವೀರೇಶ ಗಣಾಚಾರಿ ಅವರ ಪೌರೋಹಿತ್ಯದಲ್ಲಿ ಜರುಗಿತು. ಶರಣ-ಶರಣೆ ಭಕ್ತಾಧಿಗಳೊಂದಿಗೆ ವಿವಾಹ ಸನ್ನಿವೇಶವನ್ನು ವಾದ್ಯವೈಭವ, ಜಯಘೋಷಗಳೊಂದಿಗೆ ಯಶಸ್ವಿಗೊಳಿಸಿದರು. ದಾನೇಶ್ವರಿ ಮಹಿಳಾ ಮಂಡಳ, ವೀರಭದ್ರ ದೇವಸ್ಥಾನ ಟ್ರಸ್ಟ್ ಕಮಿಟಿ, ಶಂಕರಲಿAಗ ದೇವಸ್ಥಾನ ಟ್ರಸ್ಟ್ ಕಮಿಟಿಯ ಪದಾಧಿಕಾರಿಗಳು, ಟ್ರಸ್ಟಿಗಳಿದ್ದರು.

ಅಧ್ಯಕ್ಷತೆಯನ್ನು ಶೋಭಾ ಗುಗ್ಗರಿ ವಹಿಸಿದ್ದರು. ಅತಿಥಿಗಳಾಗಿ ಶಿವಲೀಲಾ ತಡಸದ, ಶಾರದಾ ಸಂಬರಗಿ, ಲಕ್ಷ್ಮೀ ಗುರಿಕಾರ, ಸುಧಾ ಕೆರೂರ, ಮಂಜುಳಾ ಡಂಬಳ, ರೂಪಾ ಯಂಡಿಗೇರಿ ಆಗಮಿಸಿದ್ದರು. ಸುರೇಖಾ ಪಿಳ್ಳೆ ನಿರೂಪಿಸಿದರು ಕೊನೆಗೆ ವಿಜಯಲಕ್ಷ್ಮೀ ಕುಬಸದ ವಂದಿಸಿದರು. ಭಕ್ತಿ ಸೇವೆ ವಹಿಸಿಕೊಂಡಿದ್ದ ಸೇವಾಕರ್ತರನ್ನು ಸನ್ಮಾನಿಸಿ ಗೌರವಿಸಲಾಯಿತು.


Spread the love

LEAVE A REPLY

Please enter your comment!
Please enter your name here